ಸಿಡಿ ಪ್ರಕರಣ: ಧ್ವನಿ ಬಗ್ಗೆ ಎಸ್‌ಐಟಿಗೆ ಅನುಮಾನ, ಎಫ್‌ಎಸ್‌ಎಲ್‌ಗೆ ಪರೀಕ್ಷೆಗೆ

ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ವಿಶೇಷ ತನಿಖಾ ತಂಡವು ವಿಡಿಯೋದಲ್ಲಿದ್ದ ವಾಯ್ಸ್ ಸ್ಯಾಂಪಲ್ ಅನ್ನು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಿದೆ.
ಸಿಡಿಯಲ್ಲಿದ್ದ 10 ನಿಮಿಷದ ವಿಡಿಯೋದಲ್ಲಿರುವುದು ಚಿಕ್ಕಮಗಳೂರಿನ ವ್ಯಕ್ತಿಯ ಧ್ವನಿ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಕಾರಣಕ್ಕೆ ವ್ಯಕ್ತಿ ವಾಯ್ಸ್ ಸ್ಯಾಂಪಲ್ ಸಂಗ್ರಹ ಮಾಡಲಾಗಿದ್ದು, ಅದನ್ನು ಎಫ್ ಎಸ್‌ಎಲ್ ಗೆ ಕಳುಸಲಾಗಿದೆ. ರಮೇಶ್ ಜಾರಕಿಹೊಳಿ ಅವರದ್ದೇ ಎಂದು ಹೇಳಲಾಗುತ್ತಿರುವ ಸಿಡಿಯಲ್ಲಿರುವ ಹಿನ್ನೆಲೆ ಧ್ವನಿಗೆ ಸಾಮ್ಯತೆ ಹೊಂದುವ ವ್ಯಕ್ತಿಯ ವಾಯ್ಸ್ ಸ್ಯಾಂಪಲ್ ಅನ್ನು ಈಗಾಗಲೇ ಎಸ್ ಐಟಿ ಸಂಗ್ರಹಿಸಿದೆ.ವರದಿ ಬಂದ ಬಳಿಕ ವಿಡಿಯೋದಲ್ಲಿರುವ ಧ್ವನಿ ಆ ವ್ಯಕ್ತಿಯದೇ ಎಂದು ತಿಳಿದುಬಂದರೆ ತಕ್ಷಣವೇ ವ್ಯಕ್ತಿಯನ್ನು ಬಂಧಿಸಲಾಗುತ್ತದೆ ಎನ್ನಲಾಗಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ನೇಹಾ ಹಿರೇಮಠ ಕೊಲೆ ಪ್ರಕರಣ: ಆರೋಪಿ ಫಯಾಜ್‌ ಆರು ದಿನ ಸಿಐಡಿ ಕಸ್ಟಡಿಗೆ

ನಿಮ್ಮ ಕಾಮೆಂಟ್ ಬರೆಯಿರಿ

advertisement