ಹಲ್ಲೆ ಆರೋಪ ಮಾಡಿದ್ದ ಯುವತಿ ವಿರುದ್ಧ ಜೊಮ್ಯಾಟೋ ಡೆಲಿವರಿ ಬಾಯ್ ದೂರು ದಾಖಲು

ಬೆಂಗಳೂರು: ತನ್ನ ವಿರುದ್ಧ ಹಲ್ಲೆ ಆರೋಪ ಮಾಡಿದ್ದ ಯುವತಿ ವಿರುದ್ಧ ಜೊಮ್ಯಾಟೋ ಡೆಲಿವರಿ ಬಾಯ್ ಕಾಮರಾಜ್ ದೂರು ದಾಖಲಿಸಿದ್ದಾರೆ.
ಆಹಾರ ಡೆಲಿವರಿ ವಿಳಂಬವನ್ನು ಪ್ರಶ್ನಿಸಿದ್ದ ಯುವತಿ ಹಿತೇಶಾ ಚಂದ್ರಾನಿ ಮೇಲೆ ಜೊಮ್ಯಾಟೋ ಡೆಲಿವರಿ ಬಾಯ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮರಾಜ್ ಸೋಮವಾರ ಎಲೆಕ್ಟ್ರಾನಿಕ್ಸ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ರೂಪೇಶ್ ರಾಜಣ್ಣ ನೇತೃತ್ವದಲ್ಲಿ ಕಾಮರಾಜ್ ದೂರು ದಾಖಲಿಸಿದ್ದಾರೆ.

ಈ ಘಟನೆ ಬಗ್ಗ ಸ್ಪಷ್ಟನೆ ನೀಡಿರುವ ಜೊಮ್ಯಾಟೋ ಕಂಪನಿ ಹಿತೇಶಾ ಮತ್ತು ಕಾಮರಾಜ್ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ, ಎರಡು ಕಡೆಯ ಅಭಿಪ್ರಾಯಗಳನ್ನೂ ನಾವು ಕೇಳಿದ್ದೇವೆ, ಸತ್ಯ ಹೊರಬರಬೇಕಿದೆ ಎಂದು ಕಂಪನಿ ತಿಳಿಸಿದೆ. ಡೆಲಿವರಿ ಬಾಯ್‌ ಕಾಮ್‌ರಾಜ್‌ನನ್ನು ಜೊಮ್ಯಾಟೊ ಕೆಲಸದಿಂದ ವಜಾಗೊಳಿಸಿದೆ.
ಇಲ್ಲಿಯವರೆಗೂ ಕಾಮರಾಜ್ ಸುಮಾರು 5000 ಫುಡ್ ಡೆಲಿವರಿ ಮಾಡಿದ್ದಾರೆ. ಅವರಿಗೆ 4.75/5 ಸ್ಟಾರ್ ರೇಟಿಂಗ್ಸ್ ಇದೆ, ಕಳೆದ 26 ತಿಂಗಳಿಂದ ಅವರು ನಮ್ಮ ಬಳಿ ಕೆಲಸ ಮಾಡುತ್ತಿದ್ದಾರೆ ಎಂದು ಕಂಪನಿ ತಿಳಿಸಿದೆ.
ಮಾರ್ಚ್ 9 ರಂದು ಘಟನೆ ನಡೆದಿತ್ತು. ದೊಡ್ಡತಗೂರು ಪ್ರದೇಶದ 31 ವರ್ಷದ ಯುವತಿ ಹಿತೇಶಾ ಚಂದ್ರಾನೀ ಜೊಮ್ಯಾಟೋ ಡೆಲಿವರಿ ಬಾಯ್ ತಮ್ಮ ಮೂಗಿಗೆ ಪಂಚ್ ಮಾಡಿದ್ದ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಾಕಿದ್ದರು. ಅದಾದ ಮರುದಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಆತನನ್ನು ಬಂಧಿಸಿದ್ದರು.

ಪ್ರಮುಖ ಸುದ್ದಿ :-   ಮತಗಟ್ಟೆ ಬಳಿ ಮಹಿಳೆಗೆ ಹೃದಯಾಘಾತ ; ತಕ್ಷಣವೇ ಸಿಪಿಆರ್‌ ಮಾಡಿ ಜೀವ ಉಳಿಸಿದ ಮತದಾನ ಮಾಡಲು ಬಂದಿದ್ದ ವೈದ್ಯ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement