ಹೊಸ ಡ್ರೈವಿಂಗ್ ಲೈಸೆನ್ಸಿಗೆ ಅರ್ಜಿ ಸಲ್ಲಿಸುವವರಿಗೆ ಹೊಸ ನಿಯಮ ಬರಲಿದೆ

ನವ ದೆಹಲಿ : ಹೊಸ ಚಾಲನಾ ಪರವಾನಿಗೆಗೆ ಅರ್ಜಿ ಸಲ್ಲಿಸುವವರು ಈ ವರ್ಷದ ನವೆಂಬರಿನಿಂದ ಡ್ರೈವಿಂಗ್ ಟೆಸ್ಟ್ ಗೆ ತೆರಳುವ ಒಂದು ತಿಂಗಳ ಮುನ್ನ ಸುರಕ್ಷಿತ ಡ್ರೈವಿಂಗ್ ಪ್ರಾಕ್ಟೀಸ್ ಬಗ್ಗೆ ಆನ್ ಲೈನ್ ವಿಡಿಯೋ ಟ್ಯುಟೋರಿಯಲ್ ನೋಡಬೇಕಿದೆ.ಇಂತಹದ್ದೊಂದು ಉಪಕ್ರಮಕ್ಕೆಸಾರಿಗೆ ಸಚಿವಾಲಯವು ಮುಂದಾಗಿದೆ.
ಈ ವಿಡಿಯೋ ಟ್ಯಟೋರಿಯಲ್ ನಲ್ಲಿ ಅಜಾಗರೂಕ ಚಾಲನೆಯಿಂದ ಬಾಧಿತರಾದವರ ಕುಟುಂಬ ಸದಸ್ಯರ ಸಂದರ್ಶನ ಮತ್ತು ಸುರಕ್ಷಿತ ಡ್ರೈವಿಂಗ್ ಬಗ್ಗೆ ವಿಡಿಯೋಗಳಿರುತ್ತವೆ. ಕೋರ್ಸ್ ಪೂರ್ಣಗೊಳಿಸಿದ ಚಾಲಕರು ತಮ್ಮ ಚಾಲನಾ ಪರವಾನಗಿಯನ್ನು ಟ್ರ್ಯಾಕ್ ಮಾಡಲು ಆಧಾರ್ ಲಿಂಕ್ ಮಾಡಲಾಗುತ್ತದೆ. ಜೊತೆಗೆ ಸಂಚಾರ ನಿಯಮ ಉಲ್ಲಂಘನೆ ಸಂದರ್ಭದಲ್ಲಿ ಪರವಾನಿಗೆ ಪಡೆದವರು ಮತ್ತು ಸಿಕ್ಕಿಬಿದ್ದವರು ಚಾಲಕ ಸುರಕ್ಷತಾ ಸರ್ಟಿಫಿಕೇಷನ್ ಕೋರ್ಸ್ ಮಾಡಬೇಕಾಗುತ್ತದೆ.
ಟೋಲ್ ಪ್ಲಾಜಾಗಳನ್ನು ದಾಟುವಾಗ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ಇರುವ ದೃಶ್ಯಗಳ ಬಗ್ಗೆ ಮಾಹಿತಿ ನೀಡಲು ಅಕ್ಟೋಬರ್ 31ರ ಗಡುವು ನೀಡಲಾಗಿದೆ. ಈ ದೃಶ್ಯಾವಳಿಗಳನ್ನು ಸ್ಥಳೀಯ ಪೊಲೀಸರೊಂದಿಗೆ ಹಂಚಿಕೊಳ್ಳಲಾಗುತ್ತದೆ.
ಇದು ಅವರಿಗೆ ನಿಯಮಗಳ ಬಗ್ಗೆ ಅರಿವು ಮೂಡಿಸಲಿದೆ ಮತ್ತು ಬೇಜವಾಬ್ದಾರಿ ಚಾಲಕರಿಗಾಗಿ ರಸ್ತೆ ಅಪಘಾತಗಳಿಂದ ಬಳಲುತ್ತಿರುವ ಜನರ ಅನುಭವಗಳ ಬಗ್ಗೆ ಅವರಿಗೆ ಅರಿವು ಮೂಡಲಿದೆ ಎಂದು ಇಂತಹದ್ದೊಂದು ಕ್ರಮಕ್ಕೆ ಸಾರಿಗೆ ಸಚಿವಾಲಯವು ಮುಂದಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement