ಸಿಡಿ ಪ್ರಕರಣ: ಯುವತಿ ತಂದೆ-ತಾಯಿ ಹೇಳಿದ್ದೇನೆಂದರೆ….

ಬೆಳಗಾವಿ : ಮಾಜಿ ಸಚಿವರ ಮೇಲಿನ ಸಿಡಿ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆ ಯುವತಿ ತಂದೆ-ತಾಯಿ ತಮ್ಮ ಹೇಳಿಕೆಯುಳ್ಳ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ಸಿಡಿಯಲ್ಲಿರುವಳು ನಾನಲ್ಲ ಎಂದು ಮಗಳು ಹೇಳಿದ್ದಾಳೆ ಎಂದು  ಅವರು ಹೇಳಿದ್ದಾರೆ.
ನನ್ನಂತೆ ಕಾಣುವ ಹುಡುಗಿಯ ದೃಶ್ಯವನ್ನು ಎಡಿಟ್ ಮಾಡಿದ್ದಾರೆ. ಅದೊಂದು ನಕಲಿ ಸಿಡಿ , ಆ ಸಿಡಿಯಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಮಗಳು ಹೇಳಿದ್ದಳು ಎಂದು ತಾಯಿ ತಿಳಿಸಿದ್ದಾರೆ.
ಟಿವಿಯಲ್ಲಿ ವಿಡಿಯೋ ನೋಡಿ ನಾನು ನನ್ನ ಮಗಳಿಗೆ ಕರೆ ಮಾಡಿದ್ದೆ,  ಆಗ ನಾನು ಯಾವುದೇ ತಪ್ಪು ಮಾಡಿಲ್ಲ, ಅದು ನಾನಲ್ಲ ಎಂದು ಹೇಳಿದ್ದಳು, ನನ್ನ ಹಾಗೆ ಕಾಣುವ ಹುಡುಗಿಯ ಫೋಟೋ ಎಡಿಟ್ ಮಾಡಿದ್ದಾರೆ. ನಾನು ಊರಿಗೆ ಕರೆದರೆ ನಾನು ಬರುವುದಿಲ್ಲ, ನನ್ನ ಜೀವಕ್ಕೆ ಅಪಾಯವಿದೆ ಎಂದು ಮಗಳು ಹೇಳಿದ್ದಳು’ ಎಂದು ಸಂತ್ರಸ್ತೆ  ತಂದೆ-ತಾಯಿ ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement