ಪಂಚಮಸಾಲಿ ಮೀಸಲು ಹೋರಾಟ ತಾತ್ಕಾಲಿಕ ಸ್ಥಗಿತ: ಸರ್ಕಾರ ಮಾತು ತಪ್ಪಿದರೆ ಮತ್ತೆ ಹೋರಾಟ

ಚಿತ್ರ ಕೃಪೆ-ಇಂಟರ್ನೆಟ್‌

ಬೆಂಗಳೂರು: ರಾಜ್ಯ ಸರ್ಕಾರದ ಭರವಸೆ ಮೇಲೆ ಪಂಚಮಸಾಲಿ ಮೀಸಲಾತಿ ಹೋರಾಟವನ್ನು ಆರು ತಿಂಗಳ ಅವಧಿ ವರೆಗೆ ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ. ಸರ್ಕಾರ  ಕ್ರಮ ಕೈಗೊಳ್ಳದಿದ್ದರೆ ಮತ್ತೆ ಹೋರಾಟ ಆರಂಭವಾಗಲಿದೆ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ಬುಧವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಬೇಡಿಕೆಗೆ “ಸರ್ಕಾರ ಆರು ತಿಂಗಳ ಕಾಲಾವಕಾಶ ಕೇಳಿದೆ. ಸರ್ಕಾರದ ಕಾಲಾವಕಾಸ ಕೇಳಿದ ಮೇಲೆ ಮಾರ್ಚ್‌ 15ರಂದು ಹೋರಾಟವನ್ನು ತಾತ್ಕಾಲಿಕವಾಗಿ ಕೈಬಿಟ್ಟಿದ್ದೇವೆ. ಸೆಪ್ಟೆಂಬರ್‌ 15ರ ವರೆಗೂ ಸರ್ಕಾರಕ್ಕೆ ಕಾಲಾವಕಾಶ ನೀಡಲಾಗುವುದು. ಸರ್ಕಾರ ಅಲ್ಲಿವರೆಗೂ ಕ್ರಮ ಕೈಗೊಳ್ಳದಿದ್ದರೆ ಮತ್ತೆ ಹೋರಾಟ ಆರಂಭವಾಗಲಿದೆ” ಎಂದು ತಿಳಿಸಿದರು.
ಸಂಕ್ರಾಂತಿಯಂದು ಕೂಡಲ ಸಂಗಮದಲ್ಲಿ ಆರಂಭವಾದ ಪಾದಯಾತ್ರೆ ಬೆಂಗಳೂರಿನ ವರೆಗೂ ನಡೆದು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಬೃಹತ್‌ ಹಕ್ಕೊತ್ತಾಯ ಸಮಾವೇಶವನ್ನೂ ಬೆಂಗಳೂರಿನಲ್ಲಿ ನಡೆಸಲಾಗಿದೆ. ಆ ಬಳಿಕ 23 ದಿನಗಳ ಧರಣಿ ಸತ್ಯಾಗ್ರಹವೂ ನಡೆದಿದೆ. ಸರ್ಕಾರದ ಈ ನಿರ್ಧಾರದಿಂದ ಹಂತದ ಯಶಸ್ಸು ದೊರಕಿದೆ ಎಂದು ಹೇಳಿದರು.
ಸಂವಿಧಾನದ ಚೌಕಟ್ಟಿನಲ್ಲಿ ಮೀಸಲಾತಿ ಕಲ್ಪಿಸಬೇಕಾದರೆ ಆರು ತಿಂಗಳ ಕಾಲಾವಕಾಶ ಬೇಕು ಎಂದು ರಾಜ್ಯ ಸರ್ಕಾರ ಕೇಳಿತ್ತು. ರಾಜ್ಯ ಹಿಂದುಳಿದ ವರ್ಗಗಳ ಆಯೋಗವೂ ಹೀಗೆ ಹೇಳಿತ್ತು. ಈ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿಯೇ ಸರ್ಕಾರದ ಭರವಸೆಗೆ ಒತ್ತಾಯ ಮಾಡಲಾಗಿತ್ತು. ಅದರಂತೆ ಸರ್ಕಾರ ವಿಧಾನಮಂಡಲದಲ್ಲೇ ಭರವಸೆ ನೀಡಿದೆ.ಹೀಗಾಗಿ ತಾತ್ಕಾಲಿಕವಾಗಿ ಹೋರಾಟ ಕೈಬಿಟ್ಟಿದ್ದೇವೆ. ಸೆಪ್ಟಂಬರ್‌ ೧೫ರ ಒಳಗಾಗಿ ನಮಗೆ ಹೇಳಿದಂತೆ ಸರ್ಕಾರ ನಡೆದುಕೊಳ್ಳದಿದ್ದರೆ ದೊರಕದಿದ್ದರೆ ಆದೇಶ ಹೊರಬೀಳುವ ವರೆಗೂ ಹೋರಾಟ ಮತ್ತೆ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಮಾ.23ರಂದು ಬೆಂಗಳೂರಿನಿಂದ ಪಾದಯಾತ್ರೆ ಸಾಗಿಬಂದ ಮಾರ್ಗದಲ್ಲಿಯೇ ಶರಣು ಶರಣಾರ್ಥಿ ಯಾತ್ರೆ ಮೂಲಕ ತೆರಳಲಾಗುವುದು. ಏಪ್ರಿಲ್‌ 11ಕ್ಕೆ ಕೂಡಲಸಂಗಮಕ್ಕೆ ತಲುಪಲಿದ್ದೇವೆ ಎಂದು ತಿಳಿಸಿದರು.
ಅಖಿಲ ಭಾರತ ಪಂಚಮಸಾಲಿ ಮಹಾಸಭಾ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ  ಮೊದಲಾದವರಿದ್ದರು.

ಪ್ರಮುಖ ಸುದ್ದಿ :-   ಮೇ 7ರ ಚುನಾವಣೆ ಬಳಿಕ ಪ್ರಜ್ವಲ್ ರೇವಣ್ಣ ಭಾರತಕ್ಕೆ ?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement