
ಕೋಲ್ಕತ್ತ: ವಿಧಾನಸಭಾ ಚುನಾವಣೆಗೆ ೧೦ ದಿನಗಳಿದ್ದರೂ ಟಿಎಂಸಿಯಿಂದ ಬಿಜೆಪಿಗೆ ಸೇರ್ಪಡೆಗೊಳ್ಳುವ ಮುಖಂಡರ ಸಂಖ್ಯೆ ಬೆಳೆಯುತ್ತಲೇ ಇದ್ದು, ಟಿಎಂಸಿ ಹಿರಿಯ ನಾಯಕ, ಸಂಸದ ಸಿಸಿರ್ ಅಧಿಕಾರಿ ಬಿಜೆಪಿಗೆ ಸೇರ್ಪಡೆಗೊಳ್ಳಲು ಸನ್ನದ್ಧರಾಗಿದ್ದಾರೆ.
ಸುವೆಂದು ಅಧಿಕಾರಿಯ ತಂದೆ ಸಿಸಿರ್ ಅಧಿಕಾರಿ ಮಾರ್ಚ್ ೨೪ರಂದು ಪೂರ್ವ ಮಿಡ್ನಾಪುರದ ಕಾಂತಿಯಲ್ಲಿ ನಡೆಯುವ ಸಾರ್ವಜನಿಕ ರ್ಯಾಲಿಯಲ್ಲಿ ಬಿಜೆಪಿ ತೆಕ್ಕೆಗೆ ಸೇರಲಿದ್ದಾರೆ ಎಂದು ಬಿಜೆಪಿ ಮುಖಂಡ ಸುವೆಂದು ಅಧಿಕಾರಿ ತಿಳಿಸಿದ್ದಾರೆ.
ತಮ್ಮ ಇಬ್ಬರು ಪುತ್ರರು ಬಿಜೆಪಿಗೆ ಸೇರ್ಪಡೆಗೊಂಡ ನಂತರವೂ ಸಿಸಿರ್ ಟಿಎಂಸಿಯಲ್ಲಿ ಉಳಿಯಲು ನಿರ್ಧರಿಸಿದ್ದರು. ಆದರೆ ಮಮತಾ ಬ್ಯಾನರ್ಜಿ ತಮ್ಮ ಪುತ್ರನ ವಿರುದ್ಧ ನಂದಿಗ್ರಾಮದಲ್ಲಿ ಸೆಣಸಲು ಮುಂದಾಗಿದ್ದರಿಂದ ಹಾಗೂ ತಮ್ಮ ಪುತ್ರರಿಗೆ ಮೀರ್ ಜಾಫರ್ ಎಂದು ದೀದಿ ಕರೆದಿದ್ದರಿಂದ ಬೇಸರಗೊಂಡ ಸಿಸಿರ್ ಬಿಜೆಪಿಗೆ ಸೇರ್ಪಡೆಗೊಳ್ಳಲು ಆಸಕ್ತಿ ತೋರಿದ್ದಾರೆ.



ನಿಮ್ಮ ಕಾಮೆಂಟ್ ಬರೆಯಿರಿ