
ಬೆಂಗಳೂರು: ಮಾಜಿ ಸಚಿವರ ಸಿಡಿ ಪ್ರಕರಣದಲ್ಲಿ ಇದ್ದಾರೆಂಬ ಶಂಕಿತ ವ್ಯಕ್ತಿಗಳ ಬ್ಯಾಂಕ್ ಅಕೌಂಟ್ಗಳ ಬಗ್ಗೆ ಎಸ್ಐಟಿ ಮಾಹಿತಿ ಪಡೆದುಕೊಳ್ಳುತ್ತಿದೆ ಎನ್ನಲಾಗಿದೆ.
ಮಾಜಿ ಸಚಿವರು ಹಲವಾರು ಮಂದಿ ರಾಜಕೀಯ ನಾಯಕರು ಸಿಡಿ ಬಹಿರಂಗಗೊಳ್ಳಲು ಭಾರೀ ಪ್ರಮಾಣದ ಹಣದ ಡೀಲ್ ನಡೆದಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಬ್ಯಾಂಕ್ಗಳ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ. ಶಂಕಿತ ವ್ಯಕ್ತಿಯೊಬ್ಬ 26 ಲಕ್ಷ ರೂ. ಹಣ ತೆಗೆದುಕೊಂಡಿದ್ದಾನೆಂಬ ಮಾಹಿತಿ ಎಸ್ಐಟಿಗೆ ಲಭ್ಯವಾಗಿದೆ. ಮತ್ತೊಬ್ಬ ಶಂಕಿತ ವ್ಯಕ್ತಿ ದುಬಾರಿ ಬೆಲೆಯ ಕಾರು ಖರೀದಿಸಲು ಮುಂದಾಗಿದ್ದ ಎಂಬ ಅಂಶವೂ ಸಹ ಕಂಡುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಶಂಕಿತ ವ್ಯಕ್ತಿಗಳ ಪಟ್ಟಿಯೊಂದನ್ನು ಎಸ್ಐಟಿ ಈಗಾಗಲೇ ಸಿದ್ಧಪಡಿಸಿದ್ದು ಕೆಲವರ ಮನೆಗಳ ಮೇಲೆ ದಾಳಿ ಮಾಡಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ ಎನ್ನಲಾಗಿದೆ.



ನಿಮ್ಮ ಕಾಮೆಂಟ್ ಬರೆಯಿರಿ