ಕುಸ್ತಿ ಪಂದ್ಯಾವಳಿ ಸೋತಿದ್ದಕ್ಕೆ ಖ್ಯಾತ ಕುಸ್ತಿಪಟುಗಳಾದ ಗೀತಾ-ಬಬಿತಾ ಫೋಗಾಟ್‌ ಸೋದರಿ ರಿತಿಕಾ ಆತ್ಮಹತ್ಯೆ

ಭಾರತೀಯ ಸ್ಟಾರ್ ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಫೋಗಾಟ್ ಅವರ 17 ವರ್ಷದ ಸೋದರಸಂಬಂಧಿ ರಿತಿಕಾ ಫೋಗಾಟ್ ಮಾರ್ಚ್ 17 ರ ಬುಧವಾರ ಅಕಾಲಿಕವಾಗಿ ನಿಧನರಾಗಿದ್ದಾರೆ.
ಕುಸ್ತಿ ಪಂದ್ಯದ ಸೋಲಿನ ನಂತರ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಗಳು ಹೇಳುತ್ತವೆ.
ವರದಿಗಳ ಪ್ರಕಾರ, ರಿತಿಕಾ ಮಾ.೧೪ರಂದು ಭರತ್‌ಪುರದ ಲೋಹಗಡ ಕ್ರೀಡಾಂಗಣದಲ್ಲಿ ನಡೆದ ಸ್ಪರ್ಧೆಯಲ್ಲಿ ಕೇವಲ ಒಂದು ಅಂಕದಿಂದ ಅಂತಿಮ ಪಂದ್ಯ(ಫೈನಲ್‌) ಸೋತಿದ್ದರು., ಅದು ಅವರಿಗೆ ತೀವ್ರವಾಗಿ ಘಾಸಿ ಮಾಡಿದ್ದರಿಂಧ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.
ಭಾರತದಾದ್ಯಂತ ಜನರು ಟ್ವಿಟ್ಟರ್‌ ಮೂಲಕ ತಮ್ಮ ಸಂತಾಪ ಸೂಚಿಸಿದ್ದಾರೆ. ಸೋದರಿ ರಿತು ಫೋಗಟ್ ಟ್ವಿಟ್ಟರ್ ನಲ್ಲಿ “ರೆಸ್ಟ್ ಇನ್ ಪೀಸ್ ಚೋಟಿ ಬೆಹೆನ್ ರಿತಿಕಾ. ನಿನ್ನೊಂದಿಗೆ ಏನಾಯಿತು ಎಂಬುದನ್ನು ಇನ್ನೂ ನಾನು ನಂಬಲು ಸಾಧ್ಯವಿಲ್ಲ. ನಿನ್ನನ್ನು ಎಂದೆಂದಿಗೂ ತಪ್ಪಿಸಿಕೊಳ್ಳುತ್ತೇನೆ. ಓಂ ಶಾಂತಿ ಎಂದು ಬರೆದಿದ್ದಾರೆ.
ರಿತಿಕಾ ಅವರ ಸಾವು ಅಂತರ್ಜಾಲದಲ್ಲಿ ಕ್ರೀಡಾಪಟುಗಳ ಮಾನಸಿಕ ಆರೋಗ್ಯ ಮತ್ತು ಆತ್ಮಹತ್ಯೆಯ ಬಗ್ಗೆ ಮತ್ತೊಮ್ಮೆ ಚರ್ಚೆಗೆ ನಾಂದಿ ಹಾಡಿದೆ. ಅತ್ಯಂತ ಎಳೆಯ ಕುಸ್ತಿಪಟುವಿನ ಸಾವಿನ ಬಗ್ಗೆ ವೈವಿಧ್ಯಮಯ ಪ್ರತಿಕ್ರಿಯೆಗಳಿವೆ. ಪ್ರತಿಯೊಬ್ಬರೂ ಪ್ರೀತಿಯಿಂದ ರಿತಿಕಾ ಅವರನ್ನು ನೆನಪಿಸಿಕೊಳ್ಳುತ್ತಾರೆ, ಅವಳನ್ನು ಸ್ಫೂರ್ತಿ ಎಂದು ಕರೆಯುತ್ತಾರೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement