ಸುಪ್ರೀಂ ಕೋರ್ಟ್ ಅಂತಿಮ ತೀರ್ಪಿನ ಬಳಿಕ ಶಬರಿಮಲೆ ವಿಷಯದ ಬಗ್ಗೆ ತೀರ್ಮಾನ: ಕೇರಳ ಸಿಎಂ

ಮಳಪ್ಪುರಂ: ಶಬರಿಮಲೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಗೊಂಡ ಬಳಿಕ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.
ಮಳಪ್ಪುರಂ ನಲ್ಲಿ ಚುನಾವಣಾ ಪ್ರಚಾರ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿರುವ ಅವರು, ಶಬರಿಮಲೆಗೆ ಮಹಿಳೆಯರು ಪ್ರವೇಶಿಸುವ ಬಗ್ಗೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಪ್ರಕಟಿಸಲಿ, ಆ ಬಳಿಕ ಭಿನ್ನಾಭಿಪ್ರಾಯಗಳನ್ನು ಹೊಂದಿರುವವರೊಂದಿಗೂ ಸರ್ಕಾರ ಚರ್ಚಿಸಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಈಗ ಶಬರಿಮಲೆ ವಿಷಯದಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲವೂ ಚೆನ್ನಾಗಿದೆ. ಈಗ ಶಬರಿಮಲೆ ವಿಷಯ ಚರ್ಚಿಸುವ ಅಗತ್ಯವಿಲ್ಲ. ಈಗ ವಿಧಾನಸಭಾ ಚುನಾವಣೆ ಬಂದಿರುವುದರಿಂದ ಕೆಲವರಿಗೆ ದೇವಾಲಯದ ಬಗ್ಗೆ ಆಸಕ್ತಿ ಬಂದಿದೆ. ಅವರ ಉದ್ದೇಶ ಸ್ಪಷ್ಟವಾಗಿದೆ. ಆದರೆ ದೇವಾಲಯದ ವಿಷಯವನ್ನು ಅದು ಇರುವಂತೆಯೇ ನೋಡಬೇಕು. ಈ ಹಿಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳ ಸಂದರ್ಭದಲ್ಲೂ ವಿಷಯ ಪ್ರಸ್ತಾಪಿಸಲಾಗಿತ್ತು” ಎಂದು ವಿಜಯನ್ ಹೇಳಿದ್ದಾರೆ.
ಎಡಪಕ್ಷವನ್ನು ಸೋಲಿಸಲು ಯುಡಿಎಫ್ ಜೊತೆಗೆ ಬಿಜೆಪಿಗೆ ಒಪ್ಪಂದವಾಗಿದೆ ಎಂಬ ಬಿಜೆಪಿಯ ಒ ರಾಜಗೋಪಾಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ವಿಜಯನ್, ಸ್ವತಃ ಬಿಜೆಪಿ ನಾಯಕರೇ ಒಪ್ಪಂದವನ್ನು ಒಪ್ಪಿಕೊಂಡಿದ್ದಾರೆ, ಇದರಿಂದ ಕಾಂಗ್ರೆಸ್ ಗೆ ನಾಚಿಕೆಯಾಗಬೇಕು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪಿಒಕೆ ಹಿಂತಿರುಗಿಸಿ, ಉಗ್ರರನ್ನು ಹಸ್ತಾಂತರಿಸಿ ; ಇದು ಬಿಟ್ಟು ಬೇರೆ ಮಾತುಕತೆ ಇಲ್ಲ; ಡಿಜಿಎಂಒ ಸಭೆಗೂ ಮುನ್ನ ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸಂದೇಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement