ಕಮಲ್‌ ಹಾಸನ್‌ ಪಕ್ಷದ ಖಜಾಂಚಿ ಮನೆಯಲ್ಲಿ ೮೦ ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ: ಐಟಿ

ಚೆನ್ನೈ; ನಟ ಕಮಲ್‍ಹಾಸನ್ ಸ್ಥಾಪಿಸಿರುವ ಮಕ್ಕಳ ನೀಧಿ ಮಾಯಂ ಪಕ್ಷದ ಖಜಾಂಚಿ ಮನೆ ಮೇಲೆ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು 11.50 ಕೋಟಿ ನಗದು ಸೇರಿದಂತೆ 80 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದ್ದಾರೆ. ಬುಧವಾರ ಮತ್ತು ಗುರುವಾರ ತಮಿಳುನಾಡಿನ ತ್ರಿಪುರಾ, ಧರ್ಮಾಪುರಂ, ಚೆನ್ನೈ ಸೇರಿದಂತೆ ಐದು ಜಾಗಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ತಪಾಸಣೆ ನಡೆಸಿದ್ದರು.
ಪ್ರಮುಖ ಉದ್ಯಮಿಯೂ ಆಗಿರುವ ಪಕ್ಷದ ಖಜಾಂಚಿ ಚಂದ್ರಶೇಖರ್ ಅವರ ಮನೆಯಲ್ಲಿ ತಪಾಸಣೆ ನಡೆಸಿದಾಗ ನಿರ್ದಿಷ್ಟ ಆದಾಯ ಮೂಲದ ಮಾಹಿತಿ ಇಲ್ಲದ 11.50 ಕೋಟಿ ರೂ. ನಗದು ಪತ್ತೆಯಾಗಿದೆ. ಜತೆಗೆ 80 ಕೋಟಿ ಅಕ್ರಮ ಆಸ್ತಿಯ ದಾಖಲೆ ಪತ್ರಗಳು ಸಿಕ್ಕಿವೆ ಎಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ. ಏಪ್ರಿಲ್ 6ರಂದು ತಮಿಳುನಾಡು ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಚಂದ್ರಶೇಖರ್ ಮನೆ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ ರಾಜಕೀಯ ಪ್ರೇರಿತ ಎಂದು ಕಮಲ್‍ಹಾಸನ್ ಟೀಕಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement