ಮತ್ತೆ ಜಿಗಿತ ಕಂಡ ಸೆನ್ಸೆಕ್ಸ್‌

ಶುಕ್ರವಾರ ವಹಿವಾಟಿನ ಆರಂಭದಲ್ಲಿ 500ಕ್ಕೂ ಹೆಚ್ಚು ಪಾಯಿಂಟ್ಸ್‌ ಕುಸಿದಿದ್ದ ಮುಂಬೈ ಷೇರುಪೇಟೆ ಸೆನ್ಸೆಕ್ಸ್‌ ಶುಕ್ರವಾರ ಮುಕ್ತಾಯ ವೇಳೆಗೆ 600ಕ್ಕೂ ಅಧಿಕ ಪಾಯಿಂಟ್ಸ್ ಜಿಗಿತ ಕಂಡಿದೆ. ಎರಡು ದಿನಗಳಿಂದ ಕುಸಿತ ಕಂಡಿದ್ದ ಶೇರು ಮಾರುಕಟ್ಟೆಯಲ್ಲಿ ಶುಕ್ರವಾರದ ತೇಜಿ ಸಮಾದಾನ ತಂದಿದೆ. . ರಾಷ್ಟ್ರೀಯ ಷೇರುಪೇಟೆ ನಿಫ್ಟಿ 186 ಪಾಯಿಂಟ್ಸ್‌ನೆಗೆತ ಕಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.30ರಷ್ಟು ಅಂದರೆ 641.72 ಪಾಯಿಂಟ್ಸ್ ಹೆಚ್ಚಳಗೊಂಡು 49,858.24 ಪಾಯಿಂಟ್ಸ್‌ಗೆ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇಕಡಾ 1.28ರಷ್ಟು ಅಥವಾ 186.10 ಪಾಯಿಂಟ್ಸ್ ಏರಿಕೆಗೊಂಡು 14,744 ಪಾಯಿಂಟ್ಸ್‌ಗೆ ತಲುಪಿದೆ.
ಎನ್‌ಟಿಪಿಸಿ, ಎಚ್‌ಯುಎಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಪವರ್ ಗ್ರಿಡ್ ಕಾರ್ಪ್ ಮತ್ತು ಯುಪಿಎಲ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿದ ಷೇರುಗಳಾದರೆ, ಎಲ್ ಅಂಡ್ ಟಿ, ಕೋಲ್ ಇಂಡಿಯಾ, ಟೆಕ್ ಮಹೀಂದ್ರಾ, ಬಜಾಜ್ ಆಟೋ ಮತ್ತು ಟೈಟಾನ್ ಕಂಪನಿಗಳು ಇಳಿಕೆ ಕಂಡಿವೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement