ಮಹಿಷಿ ಪ್ರತಿಷ್ಠಾನ ಯೋಗ – ಪ್ರಕೃತಿ ಚಿಕಿತ್ಸೆ – ಸಂಶೋಧನಾ ಕೇಂದ್ರ

 

ಆರೋಗ್ಯವೆಂದರೆ ದೈಹಿಕ, ಮಾನಸಿಕ, ಆಧ್ಯಾತ್ಮಕ, ಸಾಮಾಜಿಕ ಮತ್ತು ಭಾವನಾತ್ಮಕವಾಗಿ ಸಮತೋಲನದಲ್ಲಿರುವುದು. ಈ ರೀತಿಯ ಆರೋಗ್ಯ ಕಾಪಾಡಿಕೊಳ್ಳವದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಪಾತ್ರ ಅತ್ಯಂತ ಮಹತ್ವ ಪೂರ್ಣವಾಗಿದೆ. ಪ್ರಕೃತಿ ಚಿಕಿತ್ಸೆ ಅಥವಾ ನ್ಯಾಚುರೋಪಧಿ ಎಂದು ಕರೆಯಲ್ಪಡುವ ಅತ್ಯಂತ ಪುರಾತನವಾದ ಭಾರತೀಯ ಚಿಕಿತ್ಸಾ ಪದ್ಧತಿ. ಪ್ರಾಕೃತಿಕವಾಗಿಯೇ ನಿರೋಗಿಗಳನ್ನಾಗಿ ಮಾಡುವುದೇ ಈ ಚಿಕಿತ್ಸೆಯ ವಿಶೇಷತೆ.
ಪ್ರಕೃತ್ಯಾಧೀನಮಾರೋಗ್ಯಂ ಎಂಬ ಶ್ಲೋಕದ ಅನುಸಾರ ಪ್ರಕೃತಿ ಅಥವಾ ನಿಸರ್ಗದ ಅಧೀನದಲ್ಲಿ ಮಾನವನ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿಯ ನಿಯಮಗಳನ್ನು ಪಾಲಿಸುವುದು ಅವಶ್ಯ.
ಪ್ರಕೃತಿ ಚಿಕಿತ್ಸೆಯ ಒಂದು ವೈಜ್ಞಾನಿಕ ಚಿಕಿತ್ಸಾ ಪದ್ಧತಿಯಾಗಿದ್ದು ಇದು ಕೇವಲ ರೋಗವನ್ನು ಮಾತ್ರ ದೂರ ಮಾಡದೆ ಮನುಷ್ಯನ ಜೀವನ ಶೈಲಿ ಸರಿಮಾಡಿ ದೇಹದ ರೋಗ ನಿರೋಧಕ ಶಕ್ತಿ ಹಾಗೂ ಚೈತನ್ಯ ಹೆಚ್ಚಿಸುವ ಮೂಲಕ ದೇಹದ ವಿಸರ್ಜನಾಂಗಗಳನ್ನು ಉತ್ತೇಜನಗೊಳಿಸಿ ದೇಹದಲ್ಲಿನ ಕಶ್ಮಲ ಹಾಗೂ ವಿಷಯುಕ್ತ ಪದಾರ್ಥಗಳನ್ನು ಹೊರಹಾಕಿ ಮಾನವನ ಆರೋಗ್ಯವನ್ನು ನೈಸರ್ಗಿಕವಾಗಿ ಹೆಚ್ಚಿಸುತ್ತದೆ.
ದೇಶ ವಿದೇಶದಲ್ಲಡೆ ಅನೇಕಾನೇಕ ಪ್ರಕೃತಿ ಚಿಕಿತ್ಸಾ ಕೇಂದ್ರಗಳು ತಲೆ ಎತ್ತಿ ನಿಂತಿವೆ. ಇಂತಹ ವಿರಳ ಸಂಸ್ಥೆಗಳಲ್ಲಿ ದಶಕದಿಂದ ಧಾರವಾಡದಲ್ಲಿದ್ದು, ತನ್ನ ಅತ್ತ್ಯುತ್ತಮ ಸೇವೆಯಿಂದ ರಾಜ್ಯದೆಲ್ಲಡೆ ಪ್ರಸಿದ್ಧವಾಗಿರುವುದು ಧಾರವಾಡ ಮಹಿಷಿ ಪ್ರತಿಷ್ಠಾನದ ಯೋಗ ಮತ್ತು ಪ್ರಾಕೃತಿಕ ಚಿಕಿತ್ಸೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ.
ಧಾರವಾಡದಿಂದ ಸುಮಾರು ೯ ಕಿಲೋಮೀಟರ್ ದೂರ ಧಾರವಾಡ-ರಾಮನಗರ- ಪಣಜಿ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ದಡ್ಡಿ ಕಮಲಾಪುರ ಗ್ರಾಮದ ಹಚ್ಚ-ಹಸಿರಿನಿಂದ ಕಂಗೊಳಿಸುತ್ತಿರುವ ಪ್ರದೇಶದಲ್ಲಿ ಈ ಆಸ್ಪತ್ರೆಯಿದ್ದು, ಜನತೆಗೆ ಅತ್ಯಂತ ಕೈಗೆಟುಕುವ ದರದಲ್ಲಿ ಚಿಕಿತ್ಸೆಯನ್ನು ನೀಡುತ್ತಿದೆ.
ಮಾನವನ ಜೀವನದ ಪುರುಷಾರ್ಥಗಳಾದ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕರ ಸಾಧನೆಗಾಗಿ ಈ ಶರೀರ
ಆಧಾರಭೂತವಾಗಿದೆ. ಮಾನವ ಶರೀರವು ಪ್ರಕೃತಿಯ ೫ ಮಹಾನ ಅಂಶಗಳಾದ (ಇವುಗಳನ್ನು ಪಂಚಮಹಾಭೂತಗಳೆಂದು ಕರೆಯಬಹುದು) ಭೂಮಿ, ಜಲ, ಅಗ್ನಿ, ವಾಯು ಮತ್ತು ಆಕಾಶದಿಂದ ರಚಿಸಲ್ಪಟ್ಟಿದೆ. ಈ ಐದು ತತ್ವಗಳಲ್ಲಿ ಸಮತೋಲನವಿದ್ದಾಗ ಮಾತ್ರ ಆರೋಗ್ಯ ಉತ್ತರಮವಾಗಿರುತ್ತದೆ. ಆದರೆ ಮಹಾತ್ವಾಕಾಂಕ್ಷೆ ಮನುಷ್ಯ ತನ್ನ ಆಸೆ-ಕಾಮನೆಗಳಿಂದಾಗಿ ತನ್ನ ಶರೀರದಲ್ಲಿನ ೫ ತತ್ವಗಳಿಂದ ಸಮತೋಲನವನ್ನು ಕಾಪಾಡಿಕೊಳ್ಳದರಿರುವ ಪರಿಣಾಮವಾಗಿ ಆತನ ಶರೀರದ ನಿರೋಧಕ ಶಕ್ತಿ ಕುಂಠಿತಗೊಳ್ಳುತ್ತದೆ. ಹೀಗಾಗಿ ಶರೀರದಲ್ಲಿ ಸಮತೋಲನ ಕಾಪಾಡುವ ದಿಸೆಯಲ್ಲಿ ಕೇವಲ ಪ್ರಕೃತಿಯನ್ನೇ ಉಪಶಮನಗೊಳಿಸುವ ದ್ರವ್ಯದಂತೆ ಪ್ರಯೋಗಿಸುವುದೇ ಪ್ರಕೃತಿಕ ಚಿಕಿತ್ಸೆಯ ಉದ್ದೇಶವಾಗಿದೆ. ಈ ಉದ್ದೇಶವು ಈ ಆಸ್ಪತ್ರೆಯಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಪ್ರಯೋಗಿಸಲಾಗುತ್ತಿದೆ.
ಈ ಆಸ್ಪತ್ರೆಯಲ್ಲಿ ಜಲಚಿಕಿತ್ಸೆ, ಮಣ್ಣುಚಿಕಿತ್ಸೆ, ಸೂಜಿ ಚಿಕಿತ್ಸೆ, ಹರ್ಬಲ್ ಚಿಕಿತ್ಸೆ, ಮಸಾಜ್ ಚಿಕಿತ್ಸೆ, ಫಿಜಿಯೋಥೆರಪಿ. ಆಹಾರ ಚಿಕಿತ್ಸೆ, ಯೋಗ ಚಿಕಿತ್ಸೆಗಳನ್ನು ನೀಡಲಾಗುತ್ತಿದ್ದು ಪ್ರತಿಯೊಂದು ಚಿಕಿತ್ಸಾ ಪದ್ಧತಿಯಲ್ಲಿ ಹಲವಾರು ರೀತಿಯ ಉಪಶಮನಗೊಳಿಸಲಾಗುತ್ತಿದೆ.
ಜಲಚಿಕಿತ್ಸೆ:
೧) ತೊಟ್ಟಿ ಸ್ನಾನ (ಟಬ್ ಬಾತ್) ೨) ಒತ್ತಡ ಸ್ನಾನ (ಪ್ರೆಷರ್ ಬಾತ್) ೩) ಕಂಡ್ರೆಸ್ ಮತ್ತು ಪೋಮೆಂಟೇಶನ್ (ಸಂಘಟಿತಗೊಳಿಸುವಿಕೆ ಮತ್ತು ಹುದುಗಿಸುವಿಕೆ) ೪) ಕಲೋನ್ ಹೈಡ್ರೋಥೆರಪಿ (ಕಲೋನ್ ಜಲ ಚಿಕಿತ್ಸೆ), ೫) ಎನಿಮಾ, ೬) ಅಫಪಸ್ನಾನ ಮತ್ತು ಇನ್ನಿತರ ಜಲಚಿಕಿತ್ಸೆಗಳಿವೆ.
ಅಂಗಮರ್ಧನ ಚಿಕಿತ್ಸೆ (ಮಸಾಸ್ ಥೆರಪಿ) :
೧) ತೈಲಾಂಗ ಮರ್ಧನ (ಆಯಿಲ್ ಮಸಾಜ್), ೨) ಹೊಳಪು ಲವಣಾಂಶಾಂಗ ಮರ್ಧನ, (ಸಾಲ್ಟ್ ಗ್ಲೋ ಥೆರಪಿ), ೩) ಪೌಡರ್ ಮಸಾಜ್, ೪) ಫಲ ಅಂಗಮರ್ಧನ (ಫ್ರೂಟ್ ಮಸಾಜ್),
ಆಕ್ಯುಪ್ರೆಶರ್ ಆಕ್ಯೂಪಂಕ್ಚರ್ (ಸೂಜಿ ಚಿಕಿತ್ಸೆ)ಯ ಮೂಲಕ ಇಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಎಲ್ಲ ಚಿಕಿತ್ಸಗಳ ಮೂಲಕ ಬೊಜ್ಜು, ಅಧಿಕ ಮಾನಸಿಕ ಒತ್ತಡ, ಮಧುಮೇಹ, ಅಸ್ತಮಾ, ಕೀಲುನೋವು, ಸಂದುನೋವು, ವಾತ, ತಳಬೆನ್ನು ನೋವು, ಕುತ್ತಿಗೆ ನೋವು, ಜಠರರೋಗ, ಅರೆತಲೆಶೂಲೆ, ವಾಯುಭಾರ, ಎಸಿಡಿಟಿ ಮತ್ತು ಗ್ಯಾಸ್‌ಟ್ರಬಲ್, ಮಲಬದ್ಧತೆ, ನರದೌರ್ಬಲ್ಯ, ಚರ್ಮರೋಗ, ಮಾದಕವ್ಯಸನಮುಕ್ತತೆ, ರಕ್ತದೊತ್ತಡ, ಒತ್ತಡ ಮತ್ತು ಒತ್ತಡ ಸುಬಂಧ ವಿಕಲತೆಗಳು, ಹಾಗೂ ಮುಟ್ಟಿನ ಅಸ್ಪಸ್ಥತೆ, ಮತ್ತು ತೊಂದರೆಗಳಿಗೆ ಪ್ರಕೃತಿ ಯೋಗ ಮತ್ತು ದೈಹಿಕ ಚಿಕಿತ್ಸೆ ನೀಡುವ ಮೂಲಕ ರೋಗಗಳಿಂದ ಮುಕ್ತಮಾಡುತ್ತಿದೆ.
ಈ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರವು ರಮ್ಯ, ನಿಸರ್ಗದಲ್ಲಿ ಸುಸಜ್ಜಿತ ಕಟ್ಟಡ ವಿವಿಧ ವಿಭಾಗ ಹಾಗು ವಸತಿ ವ್ಯವಸ್ಥೆಯನ್ನು ಹೊಂದಿದ್ದು, ಶುಚಿ-ರುಚಿಯಾದ ಪಥ್ಯಾಹಾರವನ್ನು ನೀಡಲಾಗುತ್ತದೆ. ಇಲ್ಲಿನ ವಸತಿ ವ್ಯವಸ್ಥೆಯನ್ನು ೪ ಭಾಗಗಳಲ್ಲಿ ವಿಂಗಡಿಸಲಾಗಿದ್ದು, ಪ್ರತಿಯೊಂದಕ್ಕೂ ಪ್ರತ್ಯೇಕ ದರವಿದೆ. ಈ ದರವು ಕೇವಲ ಆಹಾರ ಮತ್ತು ವಸತಿ ವ್ಯವಸ್ಥೆಯನ್ನು ಮಾತ್ರ ಒಳಗೊಂಡಿದ್ದು, ಚಿಕಿತ್ಸಾ ವೆಚ್ಚವು ಪ್ರತ್ಯೇಕವಾಗಿರುತ್ತದೆ.
ಸದ್ಯ ಮಹಿಷಿ ಟ್ರಸ್ಟಿನ ನಿರ್ವಾಹಕ ಟ್ರಸ್ಟಿಯಾಗಿ ಸಾವಿತ್ರಿ ಮಹಿಷಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಬೆಂಬಲವಾಗಿ ಟ್ರಸ್ಟಿನ ಪದಾಧಿಕಾರಿಗಳು ಸಹಾಯ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ.
ಮಹಿಷಿ ಟ್ರಸ್ಟ್ ಧಾರವಾಡವು ದಿವಂಗತರಾದ ಶ್ರೀಮತಿ ಕಮಲಾಬಾಯಿ ಮತ್ತು ಶ್ರೀ ಬಿಂದುರಾವ ಅಚ್ಯುತರಾವ ಮಹಿಷಿ ಅವರ ಕುಟುಂಬದ ಸದಸ್ಯರೆಲ್ಲ ಸೇರಿ ಹುಟ್ಟು ಹಾಕಿದ ಸಂಸ್ಥೆ. ಅಂತೆಯೇ ಇದಕ್ಕೆ ಮಹಿಷಿ ಕುಟುಂಬ ಸಾರ್ವಜನಿಕ ದತ್ತಿ ಪ್ರತಿಷ್ಠಾನವೆಂಬ ಹೆಸರಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ

ಜೊತೆಗೆ ಕೆಲ ಸಮಾನಮನಸ್ಕ ಆರ್ಥಿಕ ಸಹಾಯ ನೀಡುತ್ತಿದ್ದು, ಸದ್ಯ ಇದು ಮಹಿಷಿ ಟ್ರಸ್ಟ್ ಎಂಬ ನೂತನ ಹೆಸರನ್ನು ಹೊಂದಿದ್ದು, ೧೯೯೦ರಲ್ಲಿ ಬಾಂಬೆ ದತ್ತಿ ಪ್ರತಿಷ್ಠಾನ ಕಾಯ್ದೆಯಡಿಯಲ್ಲಿ ನೋಂದಣಿಯಾಗಿ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ ಕಾನೂನಾತ್ಮಕ ಆರೋಗ್ಯ ಕ್ಷೇತ್ರಗಳ ಜನಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ.
ಯೋಗ ಮತ್ತು ನಿಸರ್ಗ ಚಿಕಿತ್ಸೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ದಡ್ಡಿ ಕಮಲಾಪುರ, ಅಳ್ನಾವರ ರಸ್ತೆ, ಧಾರವಾಡ-೫೮೦೦೭ ಇಲ್ಲಿ ಖುದ್ದಾಗಿ ಭೇಟಿ ನೀಡಿ ಅಥವಾ ಮೋಬೈಲ್ ಸಂಖ್ಯೆ ೬೩೬೧೭೦೮೨೦೮, ೭೬೭೬೧೫೦೧೪೬, ೯೪೪೮೩೨೫೫೯೫, ೯೪೪೮೩೨೪೫೧೦೬ ಗಳನ್ನು ಸಂಪರ್ಕಿಸಬಹುದಾಗಿದೆ. ಅಥವಾ ಅಧಿಕೃತ ಜಾಲತಾಣವಾದ :www.mahishitrustnaturopathy.in ತಾಣಕ್ಕೆ ಭೇಟಿ ನೀಡಬಹುದಾಗಿದೆ.

ಈ ಮೇಲ್ : [email protected] ಸಂಪರ್ಕಿಸಬಹುದಾಗಿದೆ.

–ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು, ಹುಬ್ಬಳ್ಳಿ

4 / 5. 6

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement