ನವ ದೆಹಲಿ: ಹೊಸ ಗೌಪ್ಯತಾ ನೀತಿ ಜಾರಿಗೆ ತರದಂತೆ ವಾಟ್ಸ್ ಆಪ್ ತಡೆಯಲು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಗೆ ಮನವಿ ಮಾಡಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಸಚಿವಾಲಯ ಪ್ರಮಾಣಪತ್ರದ ಮೂಲಕ ನೀಡಿರುವ ತನ್ನ ಹೇಳಿಕೆಯಲ್ಲಿ ವಾಟ್ಸ್ ಆಪ್ ನ ಹೊಸ ಗೌಪ್ಯತಾ ನೀತಿಯನ್ನು ಪ್ರಶ್ನಿಸಿದೆ.
ಭಾರತದ ಡಾಟಾ ಭದ್ರತೆ ಹಾಗೂ ಗೌಪ್ಯತಾ ಕಾನೂನುಗಳಿಗೆ ಧಕ್ಕೆಯಾಗುವಂತಹ ಅಂಶಗಳು ಹೊಸ ನೀತಿಯಲ್ಲಿ ಗೋಚರಿಸುತ್ತಿವೆ ಎಂದು ಅರ್ಜಿದಾರರಾದ ಸೀಮಾ ಸಿಂಗ್ ಹಾಗೂ ಮೇಘನ್ ಸಿಂಗ್ ಹೇಳಿದ್ದಾರೆ.
ಹೊಸ ಉದ್ದೇಶಿತ ಗೌಪ್ಯತೆ ನೀತಿ ಬದಲಾವಣೆಗಳನ್ನು ಪರಿಶೀಲಿಸುವಂತೆ ಭಾರತ ಸರ್ಕಾರ ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಅನ್ನು ಕೇಳಿದೆ ಎಂದು ಐಟಿ ಮತ್ತು ಸಂವಹನ ರಾಜ್ಯ ಸಚಿವ ಸಂಜಯ್ ಧೋತ್ರೆ ಬುಧವಾರ ಲೋಕಸಭೆಗೆ ಮಾಹಿತಿ ನೀಡಿದರು.
ಹೊಸ ನೀತಿಯನ್ನು ಬಳಕೆದಾರರು ಒಪ್ಪಿಕೊಳ್ಳಬಹುದು ಅಥವಾ ಆಪ್ ತೊರೆಯಬಹುದು, ಆದರೆ ತಮ್ಮ ಡೇಟಾವನ್ನು ಫೇಸ್ ಬುಕ್ ಒಡೆತನದ ಅಥವಾ ಇನ್ಯಾವುದೇ ಮೂರನೇ ಆಪ್ ಗಳೊಂದಿಗೆ ಹಂಚಿಕೆ ಮಾಡುವುದಿಲ್ಲ ಎನ್ನುವಂತಿಲ್ಲ ಎಂದು ಮನವಿ ಮಾಡಿದ್ದಾರೆ.
ಹೊಸ ಗೌಪ್ಯತೆ ನೀತಿಯಿಂದಾಗಿ ವೇದಿಕೆ ಪ್ರಪಂಚದಾದ್ಯಂತ ಟೀಕೆಗೆ ಗುರಿಯಾಗಿದೆ. ವಾಟ್ಸಾಪ್ ತನ್ನ ಮೂಲ ಕಂಪನಿ ಫೇಸ್‌ಬುಕ್‌ನೊಂದಿಗೆ ಡೇಟಾವನ್ನು ಹಂಚಿಕೊಳ್ಳಲು ಯೋಜಿಸಿದೆ ಎಂಬ ಆತಂಕಗಳು ವೇದಿಕೆಯಲ್ಲಿ ವಿವಿಧ ಆರೋಪಗಳಿಗೆ ಕಾರಣವಾಗಿದೆ.
ಪ್ಲಾಟ್‌ಫಾರ್ಮ್‌ನಲ್ಲಿನ ಸಂದೇಶಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿವೆ ಮತ್ತು ವಾಟ್ಸಾಪ್ ಅಥವಾ ಫೇಸ್‌ಬುಕ್ ಎರಡೂ ಖಾಸಗಿ ಸಂದೇಶಗಳನ್ನು ವಾಟ್ಸಾಪ್ ಪ್ಲಾಟ್‌ಫಾರ್ಮ್‌ನಲ್ಲಿ ನೋಡುವುದಿಲ್ಲ ಎಂದು ವಾಟ್ಸಾಪ್ ತನ್ನ ಕಡೆಯಿಂದ ಹೇಳಿಕೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ