ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಿಂದ ಆಡಳಿತದಲ್ಲಿ ಕ್ರಾಂತಿ; ಬೊಮ್ಮಾಯಿ

ಹುಬ್ಬಳ್ಳಿ: ಕಂದಾಯ ಸಚಿವ ಆರ್.ಅಶೋಕ ರೂಪಿಸಿದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಿಂದ ಆಡಳಿತದಲ್ಲಿ ಕ್ರಾಂತಿಯಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದರು.
ಛಬ್ಬಿ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಭಾಗವಹಸಿ ಅವರು ಮಾತನಾಡಿದರು.ಸಚಿವರ ಪರಿಶ್ರಮದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮ ಯಶಸ್ವಿಯಾಗಿದೆ. ಸಚಿವ ಸ್ನೇಹಿತ ಅಶೋಕ ರಾತ್ರಿ ಗ್ರಾಮಕ್ಕೆ ಬಂದು ವಾಸ್ತವ್ಯ ಮಾಡದೇ ಹಗಲ ಹೊತ್ತಿನಲ್ಲಿ ಬಂದು ಜನರ ಅಹವಾಲು ಸ್ವೀಕರಿಸಿ ಸಮಸ್ಯೆ ಬಗೆಹರಿಸಿ ವಾಸ್ತವ್ಯ ಮಾಡುತ್ತಾರೆ. ಸರ್ಕಾರ ಜನರ ಮನೆಗಳ ಬಾಗಿಗೆ ಬಂದಿದೆ. ಇದರಿಂದ ಹಳ್ಳಿಗಳ ಸಮಸ್ಯೆ ಚಿತ್ರಣ ಅಧಿಕಾರಿಗಳಿಗೆ ಲಭ್ಯವಾಗುತ್ತದೆ. ಇದು ಯೋಜನೆ ಅನುಷ್ಠಾನಕ್ಕೆ ಅನುಕೂಲವಾಗುತ್ತದೆ. ಈ ಕಾರ್ಯಕ್ರಮ ಅಧಿಕಾರದ ವಿಕೇಂದ್ರಿಕರಣ ನಿಜ ರೂಪವಾಗಿದೆ. ಇದರಿಂದ ಜನರಿಗೆ ಸರ್ಕಾರ ಮೇಲೆ ವಿಶ್ವಾಸ ಬರುತ್ತದೆ. ಇದಕ್ಕೆ ಮುಖ್ಯಮಂತ್ರಿಗಳ ಬೆಂಬಲವಿದೆ. ಛಬ್ಬಿ ಗ್ರಾಮದಲ್ಲಿ ಎಲ್ಲಾ ಸಮುದಾಯದವರು ಸಾಮರಸ್ಯದಿಂದ ಇದ್ದಾರೆ. ಛಬ್ಬಿ ಗಣಪತಿ ಪ್ರಸಿದ್ಧಿಯಾಗಿದೆ. ಛಭ್ಬಿಗೆ ಉಪಠಾಣೆ ನೀಡಲಾಗುವುದು ಎಂದರು.
ವಿಧಾನ ಸೌಧದಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಬಿಸ್ಲೆರಿ ನೀರು ಕುಡಿದು ಹಳ್ಳಿಗಳ ಕುಡಿಯುವ ನೀರಿನ ಕುರಿತು ಚರ್ಚಿಸುತ್ತೇವೆ. ಆದರೆ ಹಳ್ಳಿಗಳಲ್ಲಿ ಸಮಸ್ಯೆ ಜೊತೆ ಜೀವಿಸುವವರ ಜೊತೆ ಇದ್ದು ಸಚಿವರು ಸಮಸ್ಯೆ ಬಗೆ ಹರಿಸುತ್ತಿದ್ದಾರೆ. ಆಳುವುದು ಬೇರೆ ಆಡಳಿತ ಮಾಡುವುದು ಬೇರೆ. ಕಲ್ಯಾಣ ಚಾಲುಕ್ಯ ಶಾಸನ ನುಡಿಯಂತೆ , ಸಚಿವ ಅಶೋಕ ಆಳುವವರನ್ನು ಆಡಳಿತ ಮಾಡವ ನಿಟ್ಟಿನಲ್ಲಿ ತೊಡಗಿಸಿದ್ದಾರೆ.ಇನ್ನು ಮುಂದೆ ಹಳ್ಳಿಗಳ ಸಮಸ್ಯೆ ಹಳ್ಳಿಗಳಲ್ಲೆ ಬಗೆ ಹರಿದು‌ ಜನರಿಗೆ ಒಳಿತಾಗಬೇಕು. ಆಡಳಿತದ ಸುತ್ತ ಜನರು ಇರಬಾರದು. ಜನರ ಮಧ್ಯ ಆಡಳಿತ ಬರಬೇಕು ಎಂದರು.
ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್.ಅಶೋಕ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ಪ್ರಮುಖ ಸುದ್ದಿ :-   ಕೊನೆಗೂ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement