ಗ್ರಾಮ ವಾಸ್ತವ್ಯ: ಲಘು ಆಹಾರ ಸೇವಿಸಿ ಪವಡಿಸಿದ ಸಚಿವ ಅಶೋಕ

ಹುಬ್ಬಳ್ಳಿ: ಛಬ್ಬಿ ಗ್ರಾಮದಲ್ಲಿ ಬೆಳಿಗ್ಗೆನಿಂದ ಅಧಿಕಾರಿಗಳ ದಂಡು ಕಟ್ಟಿಕೊಂಡು ಗ್ರಾಮದ ಬೀದಿ ಸುತ್ತಿ ಜನರ ಅಹವಾಲುಗಳನ್ನು ಸ್ವೀಕರಿಸಿ ಪರಿಷ್ಕರಣೆ ಮಾರ್ಗ ತೋರಿದ ಕಂದಾಯ ಸಚಿವ ಆರ್.ಅಶೋಕ್ ಸರ್ಕಾರಿ ಶಾಲೆ ಕೊಠಡಿಯಲ್ಲಿ ವಾಸ್ತವ್ಯ ಹೂಡಿದರು.
ಮಧ್ಯಾಹ್ನ ಉತ್ತರ ಕರ್ನಾಟಕದ ರೊಟ್ಟಿ ಊಟ ಸವಿದ ಸಚಿವರಿಗೆ ತುಸು ಖಾರ ಎನಿಸಿತು. ರಾತ್ರಿ ಲಘು ಆಹಾರವಾಗಿ ಮೊಸರನ್ನ ಸೇವಿಸಿದರು.
ಸರ್ಕಾರ ಶಾಲೆಯ ಕೊಠಡಿಯಲ್ಲಿ ಸಚಿವರಿಗಾಗಿ ಕೊಠಡಿಯಲ್ಲಿ ಚಾಪೆ, ದಿಂಬು, ಏರ್ ಕೂಲರ್, ಫ್ಯಾನ್ ವ್ಯವಸ್ಥೆ ಮಾಡಲಾಗಿತ್ತು. ಮಲಗುವ ಮುನ್ನ ಗ್ರಾಮದ ಬೀದಿಯಲ್ಲಿ ವಿಹರಿಸಿದ ಸಚಿವರು ದಾರಿಯಲ್ಲಿ ಸಿಕ್ಕವರ ಅಹವಾಲುಗಳನ್ನು ಸ್ವೀಕರಿದರು‌‌. ನಂತರ ಕೊಠಡಿಯಲ್ಲಿ ನಿದ್ರೆಗೆ ಜಾರಿದರು.
ಸಚಿವರೊಂದಿಗೆ ಕಂದಾಯ ಇಲಾಖೆಯ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ತಹಸೀಲ್ದಾರಗಳು ಪಕ್ಕದ ಕೊಠಡಿಯಲ್ಲಿ ಮಲಗಿದರು.

3 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಆದಿತ್ಯ ಎಲ್‌1, ಪ್ರೋಬಾ-3 ಉಪಗ್ರಹಗಳ ನೆರವಿನಿಂದ ಸೌರ ಸ್ಫೋಟಗಳ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement