ಉತ್ತರ ಪ್ರದೇಶ: ೮ನೇ ಕ್ಲಾಸ್‌ ಪಾಸ್‌ ಆದವ ಹೆರಿಗೆ ಮಾಡಲು ಹೋಗಿ ತಾಯಿ-ಮಗು ಸಾವು

ಸುಲ್ತಾನಪುರ : ಉತ್ತರ ಪ್ರದೇಶ ಮತ್ತೊಂದು ಅಧ್ವಾನಕ್ಕೆ ಸಾಕ್ಷಿಯಾಗಿದೆ. ವ್ಯಕ್ತಿಯೊಬ್ಬನ ಅಧ್ವಾನದಿಂದ ತಾಯಿ-ಮಗು ಸತ್ತು ಹೋಗಿದೆ..!
8ನೇ ತರಗತಿ ಓದಿರುವ ವ್ಯಕ್ತಿಯೊಬ್ಬ ಹೆರಿಗೆ ಮಾಡಲು ಹೋಗಿ ತಾಯಿ- ಮಗು ಮೃತಪಟ್ಟ ಘಟನೆ ಉತ್ತರ ಪ್ರದೇಶದ ಸುಲ್ತಾನಪುರದಲ್ಲಿ ನಡೆದಿದೆ.
ಹೆರಿಗೆ ನೋವಿನಿಂದ ಬಳಲುತ್ತಿದ್ದು ಮಲ್ಲನ್‌ನ ಪೂರ್ವಾ ಗ್ರಾಮದ ಪೂನಂ ಎನ್ನುವ ಹೆಸರಿನ ಗರ್ಭಿಣಿ ಮಹಿಳೆ ಮಂಗಳವಾರ ರಾತ್ರಿ, ಸುಲ್ತಾನಪುರದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆಯಲ್ಲಿ ಆಸ್ಪತ್ತೆಯಲ್ಲಿದ್ದ 8 ಹಾಗೂ ಐದನೇ ತರಗತಿ ಓದಿದವರು ಹೆರಿಗೆ ಮಾಡಲು ಮುಂದಾಗಿದ್ದಾರೆ.ಹೆರಿಗೆ ಸಮಯದಲ್ಲಿ ಗರ್ಭಿಣಿ ಮಹಿಳೆಯ ಆರೋಗ್ಯದಲ್ಲಿ ಏರು ಪೇರು ಉಂಟಾದ ಪರಿಣಾಮ, ಕೂಡಲೇ ಲಕ್ನೋಗೆ ಚಿಕಿತ್ಸೆಗಾಗಿ ಕಳುಹಿಸಿಕೊಟ್ಟಿದ್ದಾರೆ. ಆದರೆ ದಾರಿಯಲ್ಲಿಯೇ ತಾಯಿ-ಮಗು ಸತ್ತು ಹೋಗಿದೆ ಎನ್ನಲಾಗಿದೆ. ಘಟನೆ ಸಂಬಂಧ ಕುಟುಂಬ ಸದಸ್ಯರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣದ ತನಿಖೆ ನಡೆಸಿದಾಗ ಈ ಆಘಾತಕಾರಿ ಸಂಗತಿಗಲು ಬೆಳಕಿಗೆ ಬಂದಿದ್ದು, ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಹೆರಿಗೆ ಮಾಡಿಸಿದವರು ಕೇವಲ ೮ನೇ ಕ್ಲಾಸ್‌ ಮಾತ್ರ ಓದಿದವರು ಎಂಬುದು ಬೆಳಕಿಗೆ ಬಂದಿದೆ. ಹೆರಿಗೆ ವೇಳೆ ಆತನ ಸಹಾಯಕ್ಕಾಗಿ ಇದ್ದ ಆತನ ಸಹೋದ್ಯೋಗಿ 5 ನೇ ತರಗತಿ ಮಾತ್ರ ಪಾಸ್ ಆಗಿದ್ದಾನೆ ಎನ್ನುವ ಆಘಾತಕಾರಿ ಮಾಹಿತಿ ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ. ತನಿಖೆಯ ಸಮಯದಲ್ಲಿ, ಆಸ್ಪತ್ರೆಯ ಆಪರೇಟರ್ ಸಹ 12 ನೇ ತರಗತಿ ಪಾಸ್ ಆದವ ಎಂದು ಗೊತ್ತಾಗಿದೆ. ಮೂವರು ಆರೋಪಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ತಮಿಳುನಾಡು ಸಂಸದ ಹೃದಯಾಘಾತದಿಂದ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement