ಬಿಜೆಪಿಯಿಂದ ರಾಮ ಮಾಧವ್‌ ಪುನಃ ಆರೆಸ್ಸೆಸ್‌ಗೆ ವಾಪಸ್‌

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮ ಮಾಧವ್ ಅವರನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ವಾಪಸ್ ಕರೆಸಿಕೊಳ್ಳಲಾಗಿದೆ.
ಬೆಂಗಳೂರು ನಗರದ ಹೊರವಲಯದ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆದ ಅಖಿಲ ಭಾರತೀಯ ಪ್ರತಿನಿಧಿ ಸಭಾದಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ರಾಮ್ ಮಾಧವ್ ಅವರಿಗೆ ಅಖಿಲ ಭಾರತ ಕಾರ್ಯಕಾರಣಿ ಸದಸ್ಯ ಸ್ಥಾನ ನೀಡಲಾಗಿದೆ.
ರಾಮ್ ಮಾಧವ್ ಅವರನ್ನು 2014ರಲ್ಲಿ ಬಿಜೆಪಿಗೆ ಕಳುಹಿಸಲಾಗಿತ್ತು. ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಇದೇ ಸಭೆಯಲ್ಲಿ ಸುನೀಲ್ ಅಂಬೇಡ್ಕರ್‌ರನ್ನು ಅಖಿಲ ಭಾರತ ಪ್ರಚಾರ ಮುಖ್ಯಸ್ಥರನ್ನಾಗಿ ಮಾಡಲಾಗಿದೆ. ಅಲೋಕ್ ಅವರನ್ನು ಅಖಿಲ ಭಾರತ್ ಪ್ರಚಾರ್ ಸಹ ಮುಖ್ಯಸ್ಥರಾಗಿ ನೇಮಿಸಲಾಗಿದೆ.

4.7 / 5. 3

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಸಮ ಸಮಾಜ ನಿರ್ಮಾಣ, ಅಂತರಂಗ-ಬಹಿರಂಗ ಶುದ್ಧಿಯಿಂದ ಜಗಜ್ಯೋತಿಯಾದ ಕಾಯಕಯೋಗಿ ವಿಶ್ವಗುರು ಬಸವಣ್ಣ...

ನಿಮ್ಮ ಕಾಮೆಂಟ್ ಬರೆಯಿರಿ

advertisement