ಹಿರೆನ್‌ ಸಾವಿನ ಪ್ರಕರಣ: ಎಟಿಎಸ್‌ನಿಂದ ಇಬ್ಬರ ಬಂಧನ

ಮುಂಬೈ; ಥಾಣೆ ಉದ್ಯಮಿ ಮನ್ಸುಖ್ ಹಿರೆನ್ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಇಬ್ಬರನ್ನು ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ ಎಂದು ಫ್ರೀ ಪ್ರೆಸ್‌ ಜರ್ನಲ್‌ ವರದಿ ಮಾಡಿದೆ.
ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಒಬ್ಬ ಪೋಲೀಸ್ ಮತ್ತು ಬುಕ್ಕಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅವರನ್ನು ಥಾಣೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್‌ ಮೂಲಗಲು ತಿಳಿಸಿವೆ.
ಥಾನೆಯಲ್ಲಿ ಆಟೋ ಸ್ಪೇರ್ ಪಾರ್ಟ್ ಶೋ ರೂಂ ನಡೆಸುತ್ತಿದ್ದ ಹಿರೆನ್ ಅವರು ಕಾಣೆಯಾದ ಒಂದು ದಿನದ ನಂತರ ಮಾರ್ಚ್ 5 ರಂದು ಮುಂಬ್ರಾದ ರೇತಿ ಬಂದರ್‌ ಕ್ರೀಕ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಫೆಬ್ರವರಿ 25 ರಂದು ದಕ್ಷಿಣ ಮುಂಬೈನ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸ ಆಂಟಿಲಿಯಾ ಬಳಿ ‘ಅವರ’ ಸ್ಫೋಟಕ ತುಂಬಿದ ಎಸ್‌ಯುವಿ ನಿಲುಗಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ತುಂಬಿದ ಎಸ್‌ಯುವಿ ಮನ್ಸುಕ್‌ ಹಿರೆನ್‌ ಅವರ ಕಳುವಾದ ಮಹಿಂದ್ರಾ ಸಾರ್ಪಿಯೋ ಆಗಿತ್ತು.
ಸಾವಿನ ನಂತರ, ಎಟಿಎಸ್ ಕೊಲೆ, ಸಾಕ್ಷ್ಯಾಧಾರಗಳ ಕಣ್ಮರೆ ಮತ್ತು ಎಪಿಐ ಸಚಿನ್ ವಾಝೆ ಅವರ ಹತ್ಯೆಯಲ್ಲಿ ಭಾಗಿಯಾಗಿರುವುದನ್ನು ಶಂಕಿಸಿರುವ ಹಿರೆನ್ ಅವರ ಪತ್ನಿ ವಿಮ್ಲಾ ಅವರ ದೂರಿನ ಮೇರೆಗೆ ಇತರ ಪ್ರಕರಣ ದಾಕಲಿಸಲಾಗಿತ್ತು.

ಪ್ರಮುಖ ಸುದ್ದಿ :-   ಭಾರತದ ಜೊತೆ ಪಾಕಿಸ್ತಾನದ ಕದನ ವಿರಾಮದ ಬಗ್ಗೆ ಚೀನಾ ಅಸಮಾಧಾನ? ಇದಕ್ಕೆ ಕಾರಣ ಏನು ಗೊತ್ತೆ...?

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement