ಎಲ್ಗರ್ ಪರಿಷತ್ ಪ್ರಕರಣ; ಸ್ಟಾನ್ ಸ್ವಾಮಿ ಜಾಮೀನು ಅರ್ಜಿ ತಿರಸ್ಕರಿಸಿದ ಎನ್‌ಐಎ ಕೋರ್ಟ್‌

ಮುಂಬೈ; ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಸ್ಟಾನ್ ಸ್ವಾಮಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಇಲ್ಲಿ ವಿಶೇಷ ಎನ್‌ಐಎ ನ್ಯಾಯಾಲಯ ಸೋಮವಾರ ತಿರಸ್ಕರಿಸಿದೆ.
ಹೆಚ್ಚುವರಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಇ. ಕೊಥಾಲಿಕರ್ ಅವರು 83 ವರ್ಷದ ಸ್ವಾಮಿಯವರ ಜಾಮೀನು ಅರ್ಜಿಯನ್ನು ಅರ್ಹತೆ ಮತ್ತು ವೈದ್ಯಕೀಯ ಆಧಾರದ ಮೇಲೆ ತಿರಸ್ಕರಿಸಿದರು.
ಜೆಸ್ಯೂಟ್ ಪಾದ್ರಿ ಮತ್ತು ಕಾರ್ಯಕರ್ತರಾಗಿದ್ದ ಸ್ವಾಮಿ ಅವರನ್ನು 2020 ರ ಅಕ್ಟೋಬರ್‌ನಲ್ಲಿ ರಾಂಚಿಯಿಂದ ಬಂಧಿಸಲಾಗಿತ್ತು, ಮತ್ತು ನಂತರ ಅವರನ್ನು ನವೀ ಮುಂಬಯಿಯ ತಾಲೋಜ ಕೇಂದ್ರ ಕಾರಾಗೃಹದಲ್ಲಿ ದಾಖಲಿಸಲಾಗಿದೆ.
ಅವರ ವಕೀಲರ ಪ್ರಕಾರ, ಸ್ವಾಮಿ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಮತ್ತು ಅವರು ತಮ್ಮ ಎರಡೂ ಕಿವಿಗಳಿಂದ ಕೇಳುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಅವರು ಹಲವಾರು ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ಸ್ವಾಮಿಯ ಜಾಮೀನು ಅರ್ಜಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿರೋಧಿಸಿತ್ತು, ಸ್ವಾಮಿ ‘ವಿಸ್ತಾಪನ್ ವಿರೋಧಿ ಜಾನ್ ವಿಕಾಸ್ ಆಂದೋಲನ್’ ಮತ್ತು ‘ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್’ ನಂತಹ ಸಂಸ್ಥೆಗಳ ತೀವ್ರ ಬೆಂಬಲಿಗ ಎಂದು ತನಿಖೆ ಬಹಿರಂಗಪಡಿಸಿದೆ ಎಂದು ಹೇಳಿದೆ.
ಎಲ್ಗರ್ ಪರಿಷತ್-ಮಾವೋವಾದಿಗಳ ಸಂಪರ್ಕ ಪ್ರಕರಣಕ್ಕೆ ಸ್ವಾಮಿಯ ಸಂಪರ್ಕವನ್ನು ಸ್ಥಾಪಿಸುವಲ್ಲಿ ಎನ್ಐಎ ವಿಫಲವಾಗಿದೆ ಎಂದು ಸ್ವಾಮಿಯ ವಕೀಲ ಷರೀಫ್ ಶೇಖ್ ವಾದಿಸಿದ್ದರು.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ: ಲಾಹೋರ್, ಇಸ್ಲಾಮಾಬಾದ್ ಮೇಲೆ ಭಾರತದ ವಾಯು ದಾಳಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement