ಕೇಂದ್ರ ಸರ್ಕಾರದಿಂದ ಹೊಸ ಅಧಿಸೂಚನೆ: ಕೆಲವು ಕೆಲಸಗಳಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ

ಆಧಾರ್ ಕಾರ್ಡ್ʼಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕೆಲವು ಕೆಲಸಗಳಿಗೆ ಆಧಾರ್ ಕಡ್ಡಾಯ ಎನ್ನುವ ನಿಯಮದಿಂದ ಹಿಂತೆಗೆದುಕೊಂಡಿದೆ.
ಈಗ ಈ ಹೊಸ ನಿಯಮದ ಪ್ರಕಾರ, ಜೀವನ ಪ್ರಮಾಣ ಪತ್ರಕ್ಕೆ ಆಧಾರ್ ಕಡ್ಡಾಯವಲ್ಲ. ಪಿಂಚಣಿದಾರರು ಇನ್ಮುಂದೆ ಆಧಾರ್ ಕಾರ್ಡ್ ತೋರಿಸಿ ತಾವು ಬದುಕಿರುವ ಬಗ್ಗೆ ಪುರಾವೆಗಳನ್ನ ನೀಡುವುದು ಕಡ್ಡಾಯವಲ್ಲ. ಬದಲಾಗಿ ಅದು ಸ್ವಯಂ ಪ್ರೇರಿತ.
ಕೇಂದ್ರ ಸರ್ಕಾರ ಈ ಬಾಧ್ಯತೆಯಿಂದ ಈಗ ವಿನಾಯಿತಿ ನೀಡಿದೆ. ಸರ್ಕಾರಿ ಕಚೇರಿಗಳ ಬಯೋಮೆಟ್ರಿಕ್ಸ್ ಹಾಜರಾತಿ ವ್ಯವಸ್ಥೆಯಲ್ಲಿಯೂ ಆಧಾರ್ ಸಂಖ್ಯೆಯ ಮೂಲಾಂಶವನ್ನು ಮೆಸೇಂಜಿಂಗ್ ಸೊಲ್ಯೂಷನ್ ಮೆಸೆಜ್ (ಸ್ಯಾಂಡಸ್) ನಲ್ಲಿ ತೆಗೆದುಹಾಕಲಾಗಿದೆ.
ಹೊಸ ನಿಯಮದ ಪ್ರಕಾರ, ಜೀವನ ಪ್ರಮಾಣ ಪತ್ರಕ್ಕೆ ಆಧಾರ್ʼನ ಮೂಲಾಂಶವನ್ನು ತೆಗೆದುಹಾಕಲಾಗಿದೆ. ಇದನ್ನ ಕಡ್ಡಾಯದಿಂದ ಸ್ವಯಂಪ್ರೇರಿತವಾಗಿ ಬದಲಾಯಿಸಲಾಗಿದೆ. ಅಂದರೆ, ಪಿಂಚಣಿದಾರರು ಬಯಸಿದರೆ ಆಧಾರ್ ಬಗ್ಗೆ ಮಾಹಿತಿ ನೀಡಬಹುದು ಅಥವಾ ಬಿಡಬಹುದು.
ತ್ವರಿತ ಸಂದೇಶ ಅಪ್ಲಿಕೇಶನ್‌ʼಗೂ ಆಧಾರ್‌ ಕಡ್ಡಾಯವಲ್ಲ ಎಂದಿದೆ. ಈ ಸಂದೇಶ್‌ ಅಪ್ಲಿಕೇಶನ್‌ʼನನ್ನ ಸರ್ಕಾರಿ ಕಚೇರಿಗಳಲ್ಲಿ ನೌಕರರ ಹಾಜರಿಗಾಗಿ ವಿನ್ಯಾಸಗೊಳಿಸಲಾಗಿದ್ದು, ಸರ್ಕಾರಿ ನೌಕರರು ಕೇವಲ ಸಂದೇಶ್‌ ಮೂಲಕವೇ ಹಾಜರಾಗಬೇಕಾಗಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಮಾರ್ಚ್ 18ರಂದು ಅಧಿಸೂಚನೆ ಹೊರಡಿಸಿದೆ. ಜೀವಪುರಾವೆಗಾಗಿ ಆಧಾರ್ʼನ ಸತ್ಯಾಸತ್ಯತೆಯು ಸ್ವಯಂಪ್ರೇರಿತವಾಗಿ ಇರುತ್ತದೆ ಮತ್ತು ಅದನ್ನು ಬಳಸುವ ಸಂಸ್ಥೆಗಳು ಜೀವಪ್ರಮಾಣ ಪತ್ರ ನೀಡಲು ಪರ್ಯಾಯ ಮಾರ್ಗಗಳನ್ನ ಕಂಡುಹಿಡಿಯಬೇಕು ಎಂದಿದೆ.

ಪ್ರಮುಖ ಸುದ್ದಿ :-   ವಿಡಿಯೊ | ನೀಟ್ ಜಟಾಪಟಿ : ಬಿಜೆಪಿಯಿಂದ ಕೆಪಿಸಿಸಿ ಕಚೇರಿ ಮುತ್ತಿಗೆ ಯತ್ನ; ಬಿಜೆಪಿ ಶಾಸಕ ಬಿಪಿ ಹರೀಶ ಮೇಲೆ ಮೊಟ್ಟೆ ಎಸೆತ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement