ಶಾರದಾ ಗ್ರುಪ್‌ ಹಗರಣ: ಸೆಬಿ ಅಧಿಕಾರಿಗಳ ನಿವಾಸಗಳ ಮೇಲೆ ಸಿಬಿಐ ದಾಳಿ

ಮುಂಬೈ: ಶಾರದಾ ಗ್ರೂಪ್ ಮಾಡಿದ ವಂಚನೆಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಮುಂಬೈನ ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾದ (ಸೆಬಿ) ಮೂವರು ಅಧಿಕಾರಿಗಳ ಕಚೇರಿಗಳು ಮತ್ತು ನಿವಾಸಗಳ ಮೇಲೆ ದಾಳಿ ನಡೆಸಿದೆ.
ಮುಖ್ಯ ಜನರಲ್ ಮ್ಯಾನೇಜರ್ (ಸಿಜಿಎಂ) ಮತ್ತು ಜನರಲ್ ಮ್ಯಾನೇಜರ್ (ಜಿಎಂ) ದರ್ಜೆಯ ಅಧಿಕಾರಿಗಳಿಗೆ ಸಂಬಂಧಿಸಿದ ಆರು ಸ್ಥಳಗಳಲ್ಲಿ ಶೋಧ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.
೧೭ ಲಕ್ಷ ಸಣ್ಣ ಪ್ರಮಾಣದ ಹೂಡಿಕದಾರರಿಂದ ಸುಮಾರು ೨೪೦೦ ಕೋಟಿ ರೂ. ಹಣ ಪಡೆದ ಶಾರದಾ ಗ್ರೂಪ್‌ ಠೇವಣಿದಾರರಿಗೆ ಮರುಪಾವತಿ ಮಾಡುವುದನ್ನು ನಿಲ್ಲಿಸಿದ ನಂತರ ೨೦೧೩ರಲ್ಲಿ ಹಗರಣ ಬಯಲಿಗೆ ಬಂದಿದೆ.
ಸಂಸ್ಥೆಯ ಚಿಟ್ ಫಂಡ್‌ ವೈಫಲ್ಯವು ಭಾರತದ ಪೂರ್ವ ಭಾಗದಲ್ಲಿ ಹಲವಾರು ಆತ್ಮಹತ್ಯೆಗಳಿಗೆ ಕಾರಣವಾಯಿತು. ಮುಂದೆ ಶಾರದಾ ಗ್ರೂಪ್‌ ಅಧ್ಯಕ್ಷ ಸುದೀಪ್ತಾ ಸೇನ್ ಹಾಗೂ ಅವರ ಇಬ್ಬರು ಸಹಚರರನ್ನು ಬಂಧಿಸಲಾಯಿತು. ಶಾರದಾ ಹಗರಣದಲ್ಲಿ ಹಲವು ಟಿಎಂಸಿ ನಾಯಕರು ಭಾಗಿಯಾಗಿದ್ದಾರೆಂಬ ಆರೋಪವಿದೆ. ಶಾರದಾ ಗ್ರೂಪ್‌ ಇನ್ನೂ 1,876 ಕೋಟಿ ರೂ. ಮೂಲ ಮೊತ್ತವನ್ನು ಹೂಡಿಕೆದಾರರಿಗೆ ಹಿಂದಿರುಗಿಸಬೇಕಾಗಿದೆ.
ಸೆಬಿಯ ಪ್ರಕಾರ, ಕಂಪನಿಯು ಸಾಮೂಹಿಕ ಹೂಡಿಕೆ ಯೋಜನೆಯನ್ನು ನಡೆಸಿತು, ಕೆಲವು ರಿಯಲ್ ಎಸ್ಟೇಟ್ ಯೋಜನೆಗಳನ್ನುತೋರಿಸುವ ಮೂಲಕ ಸಾರ್ವಜನಿಕರಿಂದ ಹಣವನ್ನು ಹೂಡಿಕೆ ಮಾಡಲು ಪ್ರೇರೇಪಿಸಿತು ಮತ್ತು ಪರೋಕ್ಷವಾಗಿ ಹೆಚ್ಚಿನ ಬಡ್ಡಿದರಗಳೊಂದಿಗೆ ಹಣವನ್ನು ಹಿಂದಿರುಗಿಸುವುದಾಗಿ ಪ್ರಚಾರ ಮಾಡಿತು.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement