ಸುಪ್ರೀಂಕೋರ್ಟಿನಲ್ಲಿ ನಾಳೆ ಪರಮ್‌ಬೀರ್‌ ಸಿಂಗ್‌ ಅರ್ಜಿ ವಿಚಾರಣೆ

ಮುಂಬೈ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಆಲಿಸಲಿದೆ.
ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಮುಂಬೈ ಮಾಜಿ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಸಲ್ಲಿಸಿದ್ದ ಬುಧವಾರ ವಿಚಾರಣೆ ನಡೆಸಲಿರುವ ಸುಪ್ರೀಂ ಕೋರ್ಟ್ ಸಿಂಗ್ ಅವರ ವರ್ಗಾವಣೆ ಆದೇಶ ಪ್ರಶ್ನಿಸಿರುವುದರ ಬಗ್ಗೆಯೂ ಆಲಿಸಲಿದೆ.
ಸಾಕ್ಷ್ಯಗಳು ನಾಶವಾಗುವ ಮೊದಲು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರ ಭ್ರಷ್ಟಾಚಾರದ ಬಗ್ಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ತನಿಖೆ ನಡೆಸಬೇಕೆಂದು ಕೋರಿ ಸಿಂಗ್ (58) ಸೋಮವಾರ ಸುಪ್ರೀಂ ಕೋರ್ಟಿಗೆ ಮೊರೆ ಹೋಗಿದ್ದಾರೆ.” ಮಾರ್ಚ್ 17 ರ ತಮ್ಮ ವರ್ಗಾವಣೆ ಆದೇಶವನ್ನು ರದ್ದುಗೊಳಿಸುವಂತೆ ಅವರು ಕೋರಿದ್ದಾರೆ.
ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರನ್ನು ತಮ್ಮ ಪರವಾಗಿ ವಾದ ಮಾಡಲು ನೇಮಕ ಮಾಡಿದ್ದರೆಂದು ನಿ ತಿಳಿದುಬಂದಿದೆ.
ದೇಶಮುಖ್ ಅವರು ನೀಡಿದ ವರ್ಗಾವಣೆ ಆದೇಶವನ್ನು ಕಾನೂನುಬಾಹಿರ ಬದಿಗಿರಿಸಲು ಸಿಂಗ್‌ ನಿರ್ದೇಶನ ಕೋರಿದ್ದಾರೆ ಮತ್ತು ಹಲವಾರು ವರ್ಷಗಳ ಆಧಾರಗಳನ್ನು ಉಲ್ಲೇಖಿಸಿದ್ದಾರೆ, ಇದರಲ್ಲಿ ಎರಡು ವರ್ಷಗಳ ಕನಿಷ್ಠ ನಿಗದಿತ ಅಧಿಕಾರಾವಧಿ ಪೂರ್ಣಗೊಳಿಸದೆ ವರ್ಗಾವಣೆ ಮಾಡಲಾಗಿದೆ ಎಂಬ ಅಂಶವನ್ನು ಒಳಗೊಂಡಂತೆ ಟಿಎಸ್ಆರ್ ಸುಬ್ರಮಣಿಯನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ 2013 ರಲ್ಲಿ ಅಪೆಕ್ಸ್ ಕೋರ್ಟ್ ಆದೇಶವನ್ನೂ ಉಲ್ಲೇಖಿಸಿದ್ದಾರೆ. ಪರಮ್‌ ಬೀರ್‌ ಸಿಂಗ್‌ ಅವರನ್ನು 2020 ರ ಫೆಬ್ರವರಿ 29 ರಂದು ಮುಂಬೈ ಪೊಲೀಸ್‌ ಆಯುಕ್ತರಾಗಿ ನೇಮಕ ಮಾಡಲಾಗಿತ್ತು.

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement