ಮಮತಾ ಬರ್ಮುಡಾ ಧರಿಸಲಿ ಎಂದ ಬಂಗಾಳ ಬಿಜೆಪಿ ಅಧ್ಯಕ್ಷರ ಹೇಳಿಕೆಗೆ ತೀವ್ರ ಆಕ್ರೋಶ

ನವ ದೆಹಲಿ: ಪಶ್ಚಿಮ ಬಂಗಾಳದ ಬಿಜೆಪಿ ಮುಖ್ಯಸ್ಥ ದಿಲೀಪ್ ಘೋಷ್ ನೀಡಿದ ಹೇಳಿಕೆ ಬಗ್ಗೆ ರಾಜಕೀಯ ವಲಯದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಪ್ರಚಾರದ ವೇಳೆ ಗಾಯಗೊಂಡಿದ್ದ ಮಮತಾ ಬ್ಯಾನರ್ಜಿ ವೀಲ್ ಚೇರ್ ನಲ್ಲಿ ಕುಳಿತುಕೊಂಡು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಬ್ಯಾಂಡೇಜ್ ಸುತ್ತಿದ ಕಾಲು ನೋವಿನಲ್ಲೇ ಪ್ರಚಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ. ಇದನ್ನು ಟೀಕಿಸುವ ಭರದಲ್ಲಿ ದಿಲೀಪ್ ಘೋಷ್ ವಿವಾದಿತ ಹೇಳಿಕೆ ನೀಡಿದ್ದಾರೆ. ಪುರುಲಿಯಾದಲ್ಲಿ ಮಗಳವಾರ ನಡೆದ ಸಮಾವೇಶದಲ್ಲಿ ಮಾತನಾಡಿದ ದಿಲೀಪ್ ಘೋಷ್ ಅವರು, ಮಮತಾ ಬ್ಯಾನರ್ಜಿ ತಮಗೆ ಪೆಟ್ಟಾಗಿರುವುದನ್ನು ತೋರಿಸಲು ಕಾಲು ಪ್ರದರ್ಶಿಸುತ್ತಿದ್ದಾರೆ. ಆ ರೀತಿ ಕಾಲು ತೋರಿಸುವ ರೀತಿಯಲ್ಲಿ ಯಾರೂ ಸೀರೆ ಧರಿಸುವುದನ್ನು ನಾನು ನೋಡಿಲ್ಲ .ಅವರು ತಮ್ಮ ಕಾಲುಗಳನ್ನು ಪ್ರದರ್ಶಿಸುವುದಾದರೆ ಸೀರೆ ಬೇಡ, ಅವರು ಬರ್ಮುಡಾ ಧರಿಸಲಿ ಎಂದು ಹೇಳಿದ್ದರು.
ಈ ಹೇಳಿಕೆಗೆ ಆಡಳಿತರೂಢ ತೃಣಮೂಲ ಕಾಂಗ್ರೆಸ್ ನಾಯಕರು, ಮಹಿಳಾ ನಾಯಕಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಕ್ಷದ ಸಂಸದರಾದ ಮೊಹುವಾ ಮೊಯಿತ್ರಾ, ಪಶ್ಚಿಮ ಬಂಗಾಳದ ಬಿಜೆಪಿ ಅಧ್ಯಕ್ಷರು ಸಾರ್ವಜನಿಕ ಸಭೆಯಲ್ಲಿ ಮಮತಾ ಸೀರೆ ಏಕೆ ಧರಿಸುತ್ತಾರೆ.? ಆಕೆ ತನ್ನ ಕಾಲನ್ನು ಉತ್ತಮವಾಗಿ ಪ್ರದರ್ಶಿಸಲು ಬರ್ಮುಡಾ ಶಾರ್ಟ್ಸ್ ಧರಿಸಬೇಕೆಂದು ಹೇಳಿಕೆ ನೀಡಿದ್ದು, ಇಂತಹ ಹೇಳಿಕೆಗಳಿಂದ ಬಂಗಾಳದಲ್ಲಿ ಗೆಲ್ಲುತ್ತೇವೆ ಎಂದು ಭಾವಿಸಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಅನೇಕ ನಾಯಕರು ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement