ಅವಧಿ ಮೀರಿದ ವಾಹನ ದಾಖಲೆಗಳ ಡಿಎಲ್, ಆರ್‌ಸಿ ಮಾನ್ಯತೆ ಅವಧಿ ವಿಸ್ತರಣೆ

ನವ ದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಅವಧಿ ಮೀರಿದ ಮೋಟಾರು ವಾಹನ ದಾಖಲೆಗಳ ಚಾಲನಾ ಪರವಾನಗಿ (ಡಿಎಲ್), ನೋಂದಣಿ ಪ್ರಮಾಣಪತ್ರ (ಆರ್‌ಸಿ)ಗಳ ಸಿಂಧುತ್ವವನ್ನು 2021 ರ ಜೂನ್ 30ರ ವರೆಗೆ ಸರ್ಕಾರ ವಿಸ್ತರಿಸಿದೆ.
ರಾಜ್ಯಗಳಿಗೆ ನೀಡಿದ ಸಲಹೆಯಲ್ಲಿ, ಫೆಬ್ರವರಿ 1, 2020, ಅಥವಾ ಮಾರ್ಚ್ 31, 2021 ರೊಳಗೆ ಮುಕ್ತಾಯಗೊಳ್ಳುವ ಫಿಟ್‌ನೆಸ್, ಪರ್ಮಿಟ್, ಡ್ರೈವಿಂಗ್ ಲೈಸೆನ್ಸ್, ನೋಂದಣಿ ಮತ್ತು ಇತರ ದಾಖಲೆಗಳ ಸಿಂಧುತ್ವವನ್ನು ಜೂನ್ 30ರ ವರೆಗೆ ವಿಸ್ತರಿಸಲಾಗುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (ಮೊಆರ್‌ಟಿಎಚ್) ಎಂದು ತಿಳಿಸಿದೆ.
ಫೆಬ್ರವರಿ 1 ರಿಂದ ಅವಧಿ ಮೀರಿದ ದಾಖಲೆಗಳ ಸಿಂಧುತ್ವವನ್ನು 2021 ರ ಜೂನ್ 30ರ ವರೆಗೆ ಮಾನ್ಯ ಎಂದು ಪರಿಗಣಿಸಬಹುದು ಎಂದು ಸಚಿವಾಲಯ ರಾಜ್ಯಗಳಿಗೆ ನೀಡಿದ ಸಲಹೆಯಲ್ಲಿ ತಿಳಿಸಿದೆ. ಅಂತಹ ದಾಖಲೆಗಳನ್ನು 2021 ರ ಜೂನ್ 30 ರ ವರೆಗೆ ಮಾನ್ಯ ಎಂದು ಪರಿಗಣಿಸಲು ಇದರ ಜಾರಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಈ ಮೊದಲು ವಿವಿಧ ಅಧಿಸೂಚನೆಗಳ ಮೂಲಕ, ಫಿಟ್‌ನೆಸ್, ಪರ್ಮಿಟ್ (ಎಲ್ಲಾ ಪ್ರಕಾರಗಳು), ಪರವಾನಗಿ, ನೋಂದಣಿ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳ ಮಾನ್ಯತೆಯನ್ನು ಮಾರ್ಚ್ 31, 2021 ರವರೆಗೆ ಮಾನ್ಯ ಎಂದು ಪರಿಗಣಿಸಬಹುದು ಎಂದು ಸೂಚಿಸಲಾಗಿತ್ತು.

ಪ್ರಮುಖ ಸುದ್ದಿ :-   ಪಹಲ್ಗಾಮ್ ದಾಳಿ : ಪ್ರವಾಸಿಗರು ಹೋರಾಡಬೇಕಿತ್ತು, ಮಹಿಳೆಯರು 'ವೀರತ್ವʼ ತೋರಬೇಕಿತ್ತು ; ನಾಲಿಗೆ ಹರಿಬಿಟ್ಟ ಬಿಜೆಪಿ ಸಂಸದ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement