ಯಾರೇ ದೂರು ಸಲ್ಲಿಸಿದರೂ ಎಸ್‌ಐಟಿಯಿಂದ ಪರಿಶೀಲನೆ

ಬೆಂಗಳೂರು; ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಸಿಡಿ ಪ್ರಕರಣದ ಕುರಿತು ಯಾರೇ ದೂರು ಸಲ್ಲಿಸಿದರೂ ಅದನ್ನು ವಿಶೇಷ ತನಿಖಾ ದಳ (ಎಸ್‌ಐಟಿ) ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಿ ಕ್ರಮ‌ಕೈಗೊಳ್ಳುತ್ತದೆ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿಡಿಯಲ್ಲಿನ ಯುವತಿಯೇ ಆಗಲಿ, ಅವರ ವಕೀಲರೇ ಆಗಲಿ. ದೂರು ಸಲ್ಲಿಸಿದ. ನಂತರ ತನಿಖೆ ‌ನಡೆಯುತ್ತದೆ. ಇದೆಲ್ಲವನ್ನೂ ಎಸ್ ಐ ಟಿ   ನೋಡಿಕೊಳ್ಳುತ್ತದೆ ಎಂದರು. ಯುವತಿಗೆ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಲಾಗುವುದು ಎಂದು ತಿಳಿಸಿದರು.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಧರ್ಮಸ್ಥಳ ಪ್ರಕರಣ; ಚಿನ್ನಯ್ಯ ನನಗೆ ಕರೆ ಮಾಡಿದ್ದ, ಆದರೆ ಎಸ್‌ಐಟಿ ಸಂಪರ್ಕಿಸಲು ಹೇಳಿದ್ದೆ- ನಟ ಪ್ರಕಾಶ್ ರಾಜ

ನಿಮ್ಮ ಕಾಮೆಂಟ್ ಬರೆಯಿರಿ

advertisement