ಹೊಸ ಪೋಸ್ಟ್‌ ಪೇಯ್ಡ್‌ ಪ್ಯಾಕ್: ಏರ್‌ ‌ಟೆಲ್, ಜಿಯೋ ಜೊತೆ ಬಿಎಸ್‌ಎನ್‌ಎಲ್‌ ಸ್ಪರ್ಧೆ ‌

ರಿಲಯನ್ಸ್ ಜಿಯೋ, ಏರ್‌ಟೆಲ್ ಮತ್ತು ವಿಐ (ವೊಡಾಫೋನ್-ಐಡಿಯಾ) ನೊಂದಿಗೆ ಸ್ಪರ್ಧಿಸಲು ಬಿಎಸ್‌ಎನ್‌ಎಲ್ ತನ್ನ ಪೋಸ್ಟ್‌ಪೇಯ್ಡ್ ಪ್ಯಾಕ್‌ಗಳನ್ನು ನವೀಕರಿಸಿದೆ. ಈ ಟೆಲಿಕಾಂ ಆಪರೇಟರ್ 798 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆಯೊಂದಿಗೆ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ನೀಡಲು ನಿರ್ಧರಿಸಿದೆ. ಈ ಮೂಲಕ ಏರ್‌ಟೆಲ್, ವಿಐ ಮತ್ತು ರಿಲಯನ್ಸ್ ಜಿಯೋ ಕಂಪನಿಯೊಂದಿಗೆ ಸ್ಪರ್ಧಿಸಲು ಹೊರಟಿದೆ.

ಬಿಎಸ್‌ಎನ್‌ಎಲ್‌ನ 798 ರೂಪಾಯಿ ಯೋಜನೆಯು 50 ಜಿಬಿ ಡೇಟಾ ಬಳಕೆದಾರರನ್ನು ನೀಡುತ್ತದೆ ಮತ್ತು ಇದರೊಂದಿಗೆ ಡೇಟಾ ರೋಲ್‌ಓವರ್, ಆಯಡ್-ಆನ್ ಸಂಪರ್ಕಗಳನ್ನು ಒಳಗೊಂಡಿದೆ.

ಬಿಎಸ್‌ಎನ್‌ಎಲ್ ಕಂಪನಿ ತನ್ನ 798 ರೂ ಯೋಜನೆಗಳೊಂದಿಗೆ ಮೂರು ಆಡ್-ಆನ್ ಸಂಪರ್ಕಗಳನ್ನು ನೀಡುತ್ತಿದೆ. ಈ ಯೋಜನೆಯು ಅನಿಯಮಿತ ಕರೆ, ಪ್ರತಿ ತಿಂಗಳು 50 ಜಿಬಿ ಡೇಟಾ, 150 ಜಿಬಿ ಡೇಟಾ ವರೆಗೆ ರೋಲ್‌ಓವರ್ ಸೌಲಭ್ಯ ಮತ್ತು ತಿಂಗಳಿಗೆ 100 ಸಂದೇಶಗಳನ್ನು ನೀಡುತ್ತಿದೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement