ಸಿಡಿ ಪ್ರಕರಣ ಬೇರೆ ರಾಜ್ಯಕ್ಕೆ ವರ್ಗಾಯಿಸುವಂತೆ ಸುಪ್ರೀಂಕೋರ್ಟ್‌ ಮೆಟ್ಟಿಲೇರಲು ಯುವತಿ ಪರ ವಕೀಲರ ತಂಡ ನಿರ್ಧಾರ

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೋಳಿ ಜೊತೆ ಸಿಡಿಯಲ್ಲಿರುವ ಕಾಣಿಸಿಕೊಂಡ ಯುವತಿಯ ಪರವಾಗಿರುವ ವಕೀಲರ ತಂಡವು ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸಲು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ತಿರ್ಮಾನಿಸಿದೆ.
ಪ್ರಕರಣದಲ್ಲಿ ಭಾಗಿಯಾಗಿರುವ ಬಿಜೆಪಿ ನಾಯಕ ಪ್ರಭಾವಶಾಲಿಯಾಗಿದ್ದು ಯುವತಿ ತನ್ನ ಸುರಕ್ಷತೆ ಬಗ್ಗೆ ಆತಂಕಗೊಂಡಿದ್ದಾಳೆ ಎಂಬ ಕಾರಣದಿಂದ ವಕೀಲರ ತಂಡ ಈ ಅಭಿಪ್ರಾಯಕ್ಕೆ ಬಂದಿದೆ ಎನ್ನಲಾಗಿದೆ.
ವಕೀಲರಲ್ಲೊಬ್ಬರಾದ ಕೆ.ಎನ್.ಜಗದೀಶ್ ಕುಮಾರ್ ಕೆಲ ಮಾಧ್ಯಮಗಳ ಜೊತೆ ಮಾತನಾಡಿ “ಯುವತಿಗೆ ಪೊಲೀಸ್ ಇಲಾಖೆಯೊಂದಿಗೆ ವಿಶ್ವಾಸದ ಕೊರತೆಯಿದೆ. ಅದಕ್ಕಾಗಿಯೇ ಅವರು ತಮ್ಮ ಹೇಳಿಕೆ ನೀಡಲು ಎಸ್‌ಐಟಿ ಎದುರು ಹಾಜರಾಗಲು ಇನ್ನೂ ಹಿಂಜರಿಯುತ್ತಿದ್ದಾರೆ. ನಾವು ಅನುಮತಿ ಕೋರಿ ನಗರ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸುತ್ತಿದ್ದೇವೆ. ನ್ಯಾಯಾಂಗ ಅಥವಾ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ತನಿಖೆಯ ಸಮಯದಲ್ಲಿ ಯಾವುದೇ ಹೇಳಿಕೆ ದಾಖಲಿಸಬಹುದು. ಯಾವುದೇ ವಿಚಾರಣೆಗೆ ಯುವತಿಯನ್ನು ಎಸ್‌ಐಟಿಗೆ ಹಸ್ತಾಂತರಿಸಬಾರದು ಎಂದು ನಾವು ಮನವಿ ಮಾಡುತ್ತೇವೆ
ಎಂದು ತಿಳಿಸಿದ್ದಾರೆ.
ದೆಹಲಿಯ ಹಿರಿಯ ವಕೀಲರು ಸೋಮವಾರ ಪ್ರಕರಣವನ್ನು ಬೇರೆ ರಾಜ್ಯಕ್ಕೆ ವರ್ಗಾಯಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸುತ್ತಾರೆ. ಏಕೆಂದರೆ ಯುವತಿ ಜಾರಕಿಹೋಳಿ ಅವರಿಂದ ಬೆದರಿಕೆ ಎದುರಿಸುತ್ತಿದ್ದಾಳೆ..” ಪ್ರಕರಣಕ್ಕೆ ಸಂಬಂಧಿಸಿದ ಎಂಟು ವಕೀಲರಿಗೆ ಅಪರಿಚಿತ ಸಂಖ್ಯೆಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಯುವತಿಯನ್ನು ಪ್ರತಿನಿಧಿಸದಂತೆ ಕೇಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement