ಗುತ್ತಿಗೆ ಆಧಾರದಲ್ಲಿ 1500 ಬಸ್‌ಗಳಿಗೆ ಬಿಎಂಟಿಸಿ ಟೆಂಡರ್ ಆಹ್ವಾನ, ಖಾಸಗೀಕರಣದ ಆರಂಭವೇ..?

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಗುತ್ತಿಗೆ ಆಧಾರದಲ್ಲಿ 1500 ಡೀಸೆಲ್ ಬಸ್ ಪಡೆಯಲು ಟೆಂಡರ್ ಆಹ್ವಾನಿಸಿದೆ.
ಕೇಂದ್ರದ ಫೇಮ್ ಯೋಜನೆ ಎರಡನೇ ಹಂತದ ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಲ್ಲಿ 300 ವಿದ್ಯುತ್ ಬಸ್ ಪಡೆಯುವ ಸಂಬಂಧ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಇದರ ಬೆನ್ನಲ್ಲೇ ಗುತ್ತಿಗೆ ಮಾದರಿಯಲ್ಲಿ 1500 ಡೀಸೆಲ್ ಪಡೆಯುವ ಸಂಬಂಧ ಬಿಎಂಟಿಸಿ ಟೆಂಡರ್ ಆಹ್ವಾನಿಸಿದೆ.
ಕೆಲ ವರ್ಷಗಳ ಹಿಂದೆ ಖಾಸಗಿಯವರಿಂದ ಗುತ್ತಿಗೆಯಲ್ಲಿ ಒಂದು ಸಾವಿರ ಬಸ್ ಪಡೆದು ಕಾರ್ಯಾಚರಣೆ ಪ್ರಯೋಗ ನಡೆದಿತ್ತು.ಆದರೆ ಅದರಿಂದ ಬಿಎಂಟಿಸಿ ಹಾಗೂ ಖಾಸಗಿ ಸಂಸ್ಥೆಗಳಿಗೆ ಲಾಭ ನೀಡದ ಹಿನ್ನೆಲೆಯಲ್ಲಿ ಅದನ್ನು ರದ್ದುಗೊಳಿಸಲಾಗಿತ್ತು.ಈಗ ಮತ್ತೆ ಖಾಸಗಿಯವರಿಂದ ಬಸ್ ಪಡೆದು ಕಾರ್ಯಾಚರಿಸಲು ಬಿಎಂಟಿಸಿ ಟೆಂಡರ್‌ ಆಹ್ವಾನಿಸಿದೆ.
ಇದರಲ್ಲಿ ಗುತ್ತಿಗೆಯಲ್ಲಿ ಬಸ್ ಪೂರೈಸುವ ಕಂಪನಿಯೇ ಬಸ್‌ಗಳ ನಿರ್ವಹಣೆ ಮಾಡಬೇಕು. ಬಿಎಂಟಿಸಿ ಕಿಮೀ ಲೆಕ್ಕದಲ್ಲಿ ಹಣ ನೀಡಲಿದೆ.
ಟಿಕೆಟ್ ಮಾರಾಟದಿಂದ ಸಂಗ್ರಹಿಸುವ ಹಣ ಬಿಎಂಟಿಸಿ ಪಡೆದುಕೊಳ್ಳಲಿದೆ. ಇದಕ್ಕೆ ಬಿಎಂಟಿಸಿ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement