ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ನಾಮಪತ್ರ ಸಲ್ಲಿಕೆ, ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಎಂದ ಕಾರಜೋಳ

ಬೆಳಗಾವಿ :ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಮಂಗಲಾ ಸುರೇಶ ಅಂಗಡಿ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿಗೆ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಅವರೊಂದಿಗೆ ಆಗಮಿಸಿದ ಅವರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಡಾ.ಕೆ.ಹರೀಶಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು: ದೇಶದಲ್ಲಿ ಮತ ಬ್ಯಾಂಕ್ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ 60 ವರ್ಷ ದೇಶದಲ್ಲಿ ಆಡಳಿತ ಮಾಡಿರುವುದನ್ನು ಬಿಟ್ಟರೆ ದೇಶಕ್ಕೆ ಏನೂ ಮಾಡಿಲ್ಲ. ‌ಮನಸ್ಸಿಗೆ ಬಂದಂತೆ ಮಾತನಾಡುವ ಸಿದ್ದರಾಮಯ್ಯ ಬೆಳಗಾವಿಗೆ ಅವರು ಏನು ಕೊಡುಗೆ ನೀಡಿದ್ದಾರೆ ಎಂದು ಹೇಳಲಿ. ಯಾರು ಏನೇ ಹೇಳಿದರೂ ಉಪಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು‌ ಮೂರು ಕ್ಷೇತ್ರದಲ್ಲಿ ಅಭ್ಯರ್ಥಿಗಳು ಆಯ್ಕೆಯಾಗುವ ಮೂಲಕ ಬಿಜೆಪಿ‌ ಬಾವುಟ ಹಾರಿಸುತ್ತೇವೆ ಎಂದು ಡಿಸಿಎಂ‌ ಗೋವಿಂದ್ ಕಾರಜೋಳ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಜ್ಜನಿಕೆಗೆ ಹೆಸರಾದ ಆಂಗಡಿಯವರ ಅಗಲಿಕೆಯಿಂದ ನಾವು ಉಪ ಚುನಾವಣೆ ಎದುರಿಸುತ್ತಿದ್ದೇವೆ . ಅವರ ಧರ್ಮಪತ್ನಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಉತ್ತರ ಕರ್ನಾಟಕ ಭಾಗವು ಬಸವಣ್ಣನವರು, ಶಿವಾಜಿ ಮಹಾರಾಜರು ಆಗಿ ಹೋದ ನಾಡು ಇದು, ಮುಖ್ಯಮಂತ್ರಿ ಯಡಿಯೂರಪ್ಪ ಈ ಭಾಗದ ಶಿಕ್ಷಣಕ್ಕೆ ಹಾಗೂ ಸೌಕರ್ಯಗಳಿಗೆ ಸಹಾಯ ಮಾಡಿದ್ದಾರೆ.ಇವನ್ನು ಮುಂದಿಟ್ಟುಕೊಂಡು ನಾವು ಮತದಾರರ ಮುಂದೆ ಮಂಗಳಾ ಪರವಾಗಿ ಮತ ಕೇಳುತ್ತೇವೆ ಎಂದರು.
ಅಂಗಡಿಯವರ ನೆನಪು ಮಾಡಿ ಅವರ ಪತ್ನಿಯನ್ನು ಆಯ್ಕೆ ಮಾಡಬೇಕು. ಅವರಿಗೆ ಅನುಕಂಪ ಇದೆ. ಮೋದಿ ಅವರ ಮಾಡಿರುವ ಕಾರ್ಯ ಇವೆ. ಇವನ್ನು ಜನರಿಗೆ ತಿಳಿ ಹೇಳುತ್ತೇವೆ ಎಂದರು.
ಬೆಳಗಾವಿಗೆ ಸಿದ್ದರಾಮಯ್ಯ ಏನು ಮಾಡಿದ್ದಾರೆ ಹೇಳಲಿ. ಏನಾದರೂ ಮಾತನಾಡಬಾರದು. ಬೆಳಗಾವಿಯಲ್ಲಿ ಸುವರ್ಣ ಸೌಧಕ್ಕೆ‌ ಕಾರಣಕರ್ತರಾದವರು ಯಡಿಯೂರಪ್ಪನವರು ಎಂಬುದನ್ನು ಮರೆಯಬಾರದು. ನಾನು ‌ಕೂಡಾ ಬೆಳಗಾವಿ ಭಾಗದವನಾಗಿದ್ದೇನೆ. ಇಲ್ಲಿ ಕಚೇರಿಗಳ‌ ಸ್ಥಳಾಂತರ ಮಾಡಲು ಕೆಲವು ಅಡೆತಡೆಗಳಿವೆ. ಅವನ್ನು ಪರಿಹರಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 10ರ ವರೆಗೆ ಮಳೆ ಮುನ್ಸೂಚನೆ

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement