ಸತೀಶ ಜಾರಕಿಹೊಳಿ ಒಟ್ಟು ಆಸ್ತಿ ಮೌಲ್ಯ126.62 ಕೋಟಿ ರೂ.

ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಸತೀಶ್‌ ಜಾರಕಿಹೊಳಿ   ಅವರ ಚರಾಸ್ತಿ 13.62 ಕೋಟಿ ರೂ.ಗಳು ಹಾಗೂ ಸ್ಥಿರಾಸ್ತಿ ಮೌಲ್ಯ 113 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ.
ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಅವರು ತಮ್ಮ ಆಸ್ತಿ ವಿವರ ಘೋಷಿಸಕೊಂಡಿದ್ದು ಅವರ ಚರಾಸ್ತಿ ಹಾಗೂ ಸ್ತಿರಾಸ್ತಿ ಸೇರಿ ಒವರ ಒಟ್ಟು ಆಸ್ತಿ ಮೌಲ್ಯ 126.62 ಕೋಟಿ ರೂ.ಗಳಾಗಿವೆ.
ಪುತ್ರ ರಾಹುಲ್‌ 1.89 ಕೋಟಿ ರೂ.,  ಪುತ್ರಿ ಪ್ರಿಯಾಂಕಾ 3.13 ಕೋಟಿ ರೂ. ಚರಾಸ್ತಿ ಹೊಂದಿದ್ದಾರೆ. ಪ್ರಿಯಾಂಕಾ ಹೆಸರಿನಲ್ಲಿ 48.46 ಲಕ್ಷ ರೂ. ಮೌಲ್ಯದ ಸ್ಥಿರಾಸ್ತಿ, ರಾಹುಲ್‌ ಹೆಸರಿನಲ್ಲಿ 2.10 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಶಕುಂತಲಾ ಅವರ ಚರಾಸ್ತಿ 6.70 ಕೋಟಿ ರೂ.ಗಳು.
ಸತೀಶ ಅವರು ತಾವು ಒಟ್ಟು 15.41 ಕೋಟಿ ರೂ. ಸಾಲ ಹೊಂದಿರುವುದಾಗಿ ಉಲ್ಲೇಖಿಸಿದ್ದಾರೆ. ಸತೀಶ ಮತ್ತು ಅವರ ಪತ್ನಿ ಶಕುಂತಲಾ ಅವರು ಪುತ್ರಿ ಪ್ರಿಯಾಂಕಾಗೆ 2.34 ಕೋಟಿ ರೂ. ಮತ್ತು ಪುತ್ರ ರಾಹುಲ್‌ಗೆ 1.83 ಕೋಟಿ ರೂ. ಸಾಲ ನೀಡಿದ್ದಾರೆ ಎಂದು ಅಫಿಡವಿಟ್‌ನಲ್ಲಿ ಮಾಹಿತಿ ಇದೆ.

ಪ್ರಮುಖ ಸುದ್ದಿ :-   ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement