ಆಧಾರ್ – ಪಾನ್ ಕಾರ್ಡ್ ಜೋಡಣೆ ಕುರಿತಂತೆ ಕೇಂದ್ರ ಸರ್ಕಾರ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ.
ಮಾರ್ಚ್ 31,2021 ರಿಂದ ಜೂನ್ 30,2021ರ ವರೆಗೆ ಗಡುವನ್ನು ವಿಸ್ತರಿಸಲಾಗಿದ್ದು, ಈ ಅವಧಿಯೊಳಗೆ ಲಿಂಕ್ ಮಾಡುವುದು ಅನಿವಾರ್ಯವಾಗಿದೆ.
ಆಧಾರ್ – ಪಾನ್ ಕಾರ್ಡ್ ಜೋಡಣೆ ಕುರಿತಂತೆ ಕೇಂದ್ರ ಸರ್ಕಾರ ಹಲವು ಬಾರಿ ಗಡುವು ವಿಧಿಸಿತ್ತು. ಆಧಾರ್ ಕಾರ್ಡ್ನೊಂದಿಗೆ ಪಾನ್ ಕಾರ್ಡ್ ಲಿಂಕ್ ಮಾಡುವ ಗಡುವನ್ನ ವಿಸ್ತರಿಸಲು ಕೇಂದ್ರ ನೇರ ತೆರಿಗೆ ಮಂಡಳಿ ಜೂನ್ನಲ್ಲಿ ಅಧಿಸೂಚನೆ ಹೊರಡಿಸಿತ್ತು.
ಬಳಿಕ ಪ್ಯಾನ್ – ಆಧಾರ್ ಲಿಂಕ್ ಮಾಡುವ ದಿನಾಂಕವನ್ನ ಮಾರ್ಚ್ 31, 2021ಕ್ಕೆ ವಿಸ್ತರಿಸಲಾಗಿತ್ತು.
ಬುಧವಾರ ಈ ಗಡುವು ಅಂತ್ಯಗೊಂಡಿದ್ದು, ಇದೀಗ ಕೇಂದ್ರ ಸರ್ಕಾರ ಗಡುವನ್ನು ಮತ್ತೊಮ್ಮೆ ವಿಸ್ತರಿಸಿದೆ. ಮಾರ್ಚ್ 31,2021 ರಿಂದ ಜೂನ್ 30,2021 ರವರೆಗೆ ಗಡುವನ್ನು ವಿಸ್ತರಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ