ಶರಣಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಉಚ್ಛಾಯಿ ರಥೋತ್ಸವ

ಕಲಬುರಗಿ : ಕಲ್ಯಾಣ ಕರ್ನಾಟಕದ ಐತಿಹಾಸಿಕ ಕಲಬುರಗಿ ಶ್ರೀ ಶರಣಬಸವೇಶ್ವರರ 199ನೇ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು (ಗುರುವಾರ) ಏಪ್ರಿಲ್ 1ರಂದು ಸಂಜೆ ಉಚ್ಛಾಯಿ ರಥೋತ್ಸವ ನಡೆಯುವ ಮೂಲಕ ಚಾಲನೆ ದೊರಕಲಿದೆ.
ಕಳೆದ ವರ್ಷ ಕೋವಿಡ ಹಿನ್ನೆಲೆಯಲ್ಲಿ ಜಾತ್ರೆ ರದ್ದು ಮಾಡಲಾಗಿತ್ತು. ಈ ತಿಂಗಳಲ್ಲಿ ಮತ್ತೆ ಕೊರೊನಾ ಅರ್ಭಟ ಹೆಚ್ಚಾಗಿದ್ದರಿಂದ ಮತ್ತೆ ಜಿಲ್ಲಾಡಳಿತ ರದ್ದು ಪಡಿಸಿದೆ. ಅದಕ್ಕಾಗಿ ಭಕ್ತಾದಿಗಳು,ಸಾವ೯ಜನಿಕರು ತಮ್ಮ ತಮ್ಮ ಮನೆಯಲ್ಲಿ ಯೇ ಇದ್ದುಕೊಂಡು ಶ್ರೀ ಶರಣನ ಕೃಪೆಗೆ ಪಾತ್ರರಾಗಬೇಕೆಂದು ಸಂಸ್ಥಾನದ ಪೀಠಾಧಿಪತಿ ಶ್ರೀ ಶರಣಬಸಪ್ಪಾ ಅಪ್ಪಾ ತಿಳಿಸಿದ್ದಾರೆ.
ಜಾತ್ರೆ ಅಂಗವಾಗಿ ಗುರುವಾರ ಇಂದು ದೇವಸ್ಥಾನಕ್ಕೆ ಭಕ್ತಾದಿಗಳು ಮಾಸ್ಕ ಧರಿಸಿ. ಆಗಮಿಸಿ ಉಚ್ಛಾಯಿ ರಥದ ದಶ೯ನ ಪಡೆದರು.
ನಾಳೆ.ಏ.2ರಂದು ಸರಳವಾಗಿ ಜಾತ್ರೆ ನಡೆಯಲಿದೆ ಎಂದು ದೇವಸ್ಥಾನದ ಮೂಲಗಳು ತಿಳಿಸಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ರಾಜ್ಯದಲ್ಲಿ ತಾಪಮಾನ ಏರಿಕೆ : ಮಾರ್ಗಸೂಚಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

ನಿಮ್ಮ ಕಾಮೆಂಟ್ ಬರೆಯಿರಿ

advertisement