ರಾಬರ್ಟ್‌ ವಾದ್ರಾಗೆ ಕೊರೊನಾ ಸೋಂಕು.. ಪ್ರಿಯಾಂಕಾ ಗಾಂಧಿ ಹೋಮ್‌ಕ್ವಾರಂಟೈನ್‌

ನವ ದೆಹಲಿ: ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪತಿ ರಾಬರ್ಟ್​ ವಾದ್ರಾಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಪ್ರಿಯಾಂಕಾ ಗಾಂಧಿ ಕೂಡ ಹೋಮ್​ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ತಮಗೆ ಕೊರೋನಾ ಸೋಂಕು ದೃಢಪಟ್ಟಿದ್ದರ ಕುರಿತು ರಾಬರ್ಟ್​ ವಾದ್ರಾ ಫೇಸ್​ಬುಕ್​ ಮೂಲಕ ಅಧಿಕೃತ ಪಡಿಸಿದ್ದರು. ಪರೀಕ್ಷೆ ವೇಳೆ ಕೋವಿಡ್​ ದೃಢಪಟ್ಟಿರುವುದಾಗಿ ತಿಳಿಸಿದ್ದರು. ರಾಬರ್ಟ್​ ವಾದ್ರಾಗೆ ಸೋಂಕು ಪತ್ತೆಯಾದ ಕಾರಣ ತಾನೂ ಕೂಡ ಕೂಡ ಕ್ವಾರಂಟೈನ್​ಗೆ ಒಳಗಾಗಿದ್ದೇನೆ ಎಂದು ಪ್ರಿಯಾಂಕಾ ಗಾಂಧಿ ಟ್ವೀಟರ್​ನಲ್ಲಿ ತಿಳಿಸಿದ್ದಾರೆ.
ವೈದ್ಯಕೀಯ ಪರೀಕ್ಷೆ ವೇಳೆ ತನ್ನ ಕೊರೋನಾ ಸೋಂಕು ವರದಿ ನೆಗೆಟಿವ್​ ಬಂದಿದೆ. ಆದರೆ, ವೈದ್ಯರ ಸಲಹೆ ಮೇರೆಗೆ ತಾವು ಕ್ವಾರಂಟೈನ್​ಗೆ ಒಳಗಾಗಿರುವುದಾಗಿ ತಿಳಿಸಿದ್ದಾರೆ. ಈ ಹಿನ್ನಲೆ ತಮ್ಮ ಚುನಾವಣಾ ಪ್ರಚಾರ ಸಮಾವೇಶಗಳನ್ನು ರದ್ದು ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement