ಸಿಎಂ ಬಿಎಸ್‌ವೈ-ಈಶ್ವರಪ್ಪ ವಿಚಾರ ಶೀಘ್ರವೇ ಬಗೆಹರಿಯಲಿದೆ:ಕಟೀಲು

ಮಂಗಳೂರು: ಈಗಾಗಲೇ ಸಚಿವ ಈಶ್ವರಪ್ಪ ಮತ್ತು ಸಂಬಂಧಪಟ್ಟವರ ಜೊತೆ ಮಾತನಾಡಿದ್ದೇವೆ. ಏನೂ ಸಮಸ್ಯೆ ಆಗದಂತೆ ಬಗೆಹರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲು ಹೇಳಿದ್ದಾರೆ
ಮುಖ್ಯಮಂತ್ರಿ ಯಡಿಯುರಪ್ಪ ಅವರ ಹಸ್ತಕ್ಷೇಪದ ಕುರಿತು ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ಪತ್ರ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಈಶ್ವರಪ್ಪ ಪಕ್ಷದ ಹಿರಿಯ ನಾಯಕರು. ಹೀಗಾಗಿ ಕುಳಿತು ಪರಸ್ಪರ ಚರ್ಚೆ ಮಾಡಬಹುದಿತ್ತು. ನನಗೂ ಪತ್ರ ಬರೆದಿದ್ದಾರೆ, ಅದೇ ಪತ್ರವನ್ನು ರಾಜ್ಯಪಾಲರಿಗೂ ಕೊಟ್ಡಿದ್ದಾರೆ ಎಂದು ತಿಳಿಸಿದರು.
ಈ ಪ್ರಕರಣ ಸರಿಯಾಗುತ್ತದೆ ಎಂಬ ವಿಶ್ವಾಸವಿದೆ. ಈಶ್ವರಪ್ಪನವರ ಪತ್ರದ ಬಳಿಕ ಈ ಬಗ್ಗೆ ಅವರ ಜೊತೆ ಚರ್ಚೆ ಮಾಡಿದ್ದೇನೆ. ಯತ್ನಾಳ್ ಮತ್ತು ಈಶ್ವರಪ್ಪನವರ ವಿಚಾರ ವಿಭಿನ್ನವಾಗಿದೆ ಎಂದು ತಿಳಿಸಿದರು.
ಈಗಾಗಲೇ ಅರುಣ್ ಸಿಂಗ್ ಅವರು ಕೂಡ ಮಾತನಾಡಿದ್ದಾರೆ. ಎಲ್ಲರ ಜೊತೆ ಕೂತು ಚರ್ಚೆ ಮಾಡಿ ಎರಡು ದಿನದಲ್ಲಿ ಪರಿಹಾರ ಮಾಡುತ್ತೇವೆ. ಇದಕ್ಕೆ ಸಭೆ ಕರೆಯುವುದಿಲ್ಲ. ವೈಯಕ್ತಿಕವಾಗಿ ಮಾತನಾಡಿ ಬಗೆಹರಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸಿಡಿ ಪ್ರಕರಣ ನ್ಯಾಯಾಲಯದಲ್ಲಿರುವ ಕಾರಣ ಯಾರ ಹೆಸರನ್ನೂ ಉಲ್ಲೇಖಿಸಿ ಮಾತನಾಡುವುದಿಲ್ಲ ಎಂದು ನಳೀನಕುಮಾರ ಕಟೀಲು ಹೇಳಿದರು.

ಪ್ರಮುಖ ಸುದ್ದಿ :-   ದೆಹಲಿಯಲ್ಲಿ ಮತ್ತೆ ಕಾಂಗ್ರೆಸ್ಸಿಗೆ ಆಘಾತ : ಪಕ್ಷಕ್ಕೆ ರಾಜೀನಾಮೆ ನೀಡಿದ ಇಬ್ಬರು ಹಿರಿಯ ನಾಯಕರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement