ಸಾಂಪ್ರದಾಯಿಕ ಉಡುಗೆಯಲ್ಲಿ ಮದುರೈ ಮೀನಾಕ್ಷೆ ದೇಗುಲಕ್ಕೆ ಭೇಟಿ ನೀಡಿದ ಮೋದಿ

ಮದುರೈ: ಸಾಂಪ್ರದಾಯಿಕವಾಗಿ ಪಂಚೆ, ಶಲ್ಯ ಧರಿಸಿದ ಪೋಷಾಕಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮಿಳು ನಾಡಿನ ಖ್ಯಾತ ಮದುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
ಮದುರೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನಂತರ ಮೋದಿಯವರು ಗುರುವಾರ ರಾತ್ರಿ 8.30ರ ಸುಮಾರಿಗೆ ನೇರವಾಗಿ ದೇವಸ್ಥಾನಕ್ಕೆ ಮೀನಾಕ್ಷಿ ದೇವಸ್ಥಾನಕ್ಕೆ ಪಂಚೆ ಮತ್ತು ಶರ್ಟ್ ಧರಸಿ ಹೋದರು.
ದೇವಸ್ಥಾನದ ಅಮ್ಮನ ಸನ್ನಿಧಿ ಮೂಲಕ ಪ್ರವೇಶಿಸಿದ ಮೋದಿಯವರಿಗೆ ದೇವಸ್ಥಾನದ ಅಧಿಕಾರಿಗಳು, ಪರಿವಾರದವರು ಪೂರ್ಣ ಕುಂಭ ಸ್ವಾಗತ ಕೋರಿದರು. ನಂತರ ಪ್ರಧಾನಿ ದೇವಸ್ಥಾನದ ಒಳಗೆ ಹೋದರು.
ದೇವಸ್ಥಾನದ ಒಳಗಿರುವ ಸಿದ್ದಿ ವಿನಯಗರ ಮತ್ತು ಮುಕ್ಕುರಾಣಿ ವಿನಯಗರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ನಂತರ ಮೀನಾಕ್ಷಿ ದೇವರ ಗರ್ಭಗುಡಿಗೆ ಹೋದರು. ಸುಂದರೇಶ್ವರ ಸನ್ನಿಧಿಗೆ ಸಹ ಭೇಟಿ ನೀಡಿದರು.ದೇವಸ್ಥಾನದ ಕೊಳಕ್ಕೆ ಭೇಟಿ ನೀಡಿ ವೀಕ್ಷಿಸಿದ ಪ್ರಧಾನಿ ಮೋದಿ ದೇವಸ್ಥಾನದ ಇತಿಹಾಸ ತಿಳಿದುಕೊಂಡರು. ನಂತರ ಭೇಟಿಗಾರರ ಪುಸ್ತಕದಲ್ಲಿ ತಮಿಳು ನಾಡಿನ ಮತ್ತು ಮದುರೈಯ ಪ್ರಾಮುಖ್ಯತೆ ಬಗ್ಗೆ ಬರೆದರು. ಪ್ರಧಾನಿಯಾದ ನಂತರ ಇದು ಅವರ ಮೊದಲನೇ ಭೇಟಿಯಾಗಿದೆ. ಹಾಗೂ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ನಂತರ ಮೋದಿ ದೇವಸ್ಥಾನಕ್ಕೆ ಭೇಟಿ ನೀಡಿದ ಮೂರನೇ ಪ್ರಧಾನಿಯಾದರು.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

3.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement