ಸೋಮವಾರ ಕೇಂದ್ರದಿಂದ ರಾಜ್ಯಕ್ಕೆ 15.25 ಲಕ್ಷ ಕೋವಿಡ್ ಲಸಿಕೆ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಏರುತ್ತಿರುವ ಬೆನ್ನಲ್ಲೇ ಕೇಂದ್ರದಿಂದ ಸಮಾಧಾನದ ಸುದ್ದಿಯೊಂದು ಬಂದಿದೆ. ರಾಜ್ಯಕ್ಕೆ ನಾಳೆ (ಸೋಮವಾರ) ಎರಡು ಪ್ರತ್ಯೇಕ ಕಂತುಗಳಲ್ಲಿ ಒಟ್ಟು 15,25,500 ಡೋಸ್ ಕೊರೊನಾ ಲಸಿಕೆ ಬರಲಿದೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿ ಮಾಹಿತಿ ನೀಡಿರುವ ಸಚಿವರು “ಕರ್ನಾಟಕಕ್ಕೆ ನಾಳೆ ಎರಡು ಪ್ರತ್ಯೇಕ ಕಂತುಗಳಲ್ಲಿ ಒಟ್ಟು 15,25,500 ಡೋಸ್ ಕೊರೊನಾ ಲಸಿಕೆ ರವಾನೆಯಾಗಲಿದೆ. ಒಂದು ಕಂತಿನಲ್ಲಿ ರಸ್ತೆ ಮೂಲಕ 5,25,500 ಡೋಸ್ ಲಸಿಕೆ ಬೆಳಗಾವಿಗೆ ತಲುಪಲಿದ್ದು, ಮತ್ತೊಂದು ಕಂತಿನಲ್ಲಿ 10,00,000 ಡೋಸ್ ಲಸಿಕೆ ವಿಮಾನದ ಮೂಲಕ ನಾಳೆ ಸಂಜೆ ಬೆಂಗಳೂರು ತಲುಪಲಿದೆ.” ಎಂದಿದ್ದಾರೆ.
ಪ್ರಸ್ತುತ ಕರ್ನಾಟಕದಲ್ಲಿ 7 ಲಕ್ಷ ಲಸಿಕೆಗಳ ದಾಸ್ತಾನು ಇದ್ದು ನೆನ್ನೆ ಒಂದೇ ದಿನ .2.5 ಲಕ್ಷ ಜನರಿಗೆ ಲಸಿಕೆ ಹಾಕಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement