ಕಾರವಾರ-ಯಶವಂತಪುರ ರೈಲು ಸಂಚಾರ ಪುನರಾರಂಭ

ಕಾರವಾರ:ಸುಮಾರು ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದ್ದ ಕಾರವಾರ-ಯಶವಂತಪುರ ರೈಲು ಸಂಚಾರ ಪುನರಾರಂಭಿಸಲು ಕೊಂಕಣ ರೈಲ್ವೇ ಮುಂದಾಗಿದೆ.
ಏ.೧೨ ರಿಂದ ಮತ್ತೆ ಈ ರೈಲು ಓಡಲಿದೆ.ಈ ಬಗ್ಗೆ ಕೊಂಕಣ ರೈಲ್ವೇ ಉಪ ಪ್ರಧಾನ ವ್ಯವಸ್ಥಾಪಕ ಜಿ. ಆರ್. ಕರಂಡಿಕರ ಮಾಹಿತಿ ನೀಡಿದ್ದು ರೈಲು ಸಂಖ್ಯೆ ೦೬೨೧೧ ಯಶವಂತಪುರ- ಕಾರವಾರ ಟ್ರೈ ವೀಕ್ಲೀ ಎಕ್ಸ್‌ಪ್ರೆಸ್ ರೈಲು ಏ.೧೨ರಿಂದ ಪ್ರತಿ ಸೋಮವಾರ, ಬುಧವಾರ ಹಾಗೂ ಶುಕ್ರವಾರಗಳಂದು ಯಶವಂತಪುರ ರೈಲಜು ನಿಲ್ದಾಣದಿಂದ ಬೆಳಿಗ್ಗೆ ೭ ಗಂಟೆಗೆ ಹೊರಟು ಅದೇ ದಿನ ರಾತ್ರಿ ೧೦.೫೫ಕ್ಕೆ ಕಾರವಾರ ನಿಲ್ದಾಣ ತಲುಪಲಿದೆ.
ರೈಲು ಸಂಖ್ಯೆ ೦೬೨೧೨ ಕಾರವಾರ-ಯಶವಂತಪುರ ಟ್ರೈ ವೀಕ್ಲೀ ಎಕ್ಸ್‌ಪ್ರೆಸ್ ರೈಲು ಏ.೧೩ ರಿಂದ ಪ್ರತಿ ಮಂಗಳವಾರ, ಗುರುವಾರ ಹಾಗೂ ಶನಿವಾರಗಳಂದು ಬೆಳಿಗ್ಗೆ ೫.೩೦ಕ್ಕೆ ಕಾರವಾರ ನಿಲ್ದಾಣದಿಂದ ಹೊರಟು ಅದೇ ದಿನ ರಾತ್ರಿ ೮.೨೦ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ.ಈ ರೈಲುಗಳು ಕುಮಟಾ, ಹೊನ್ನಾವರ, ಭಟ್ಕಳ, ಮೂಕಾಂಬಿಕಾ ರೋಡ್, ಕುಂದಾಪುರ, ಉಡುಪಿ, ಸುರತ್ಕಲ್, ಮಂಗಳೂರು, ಬಂಟ್ವಾಳ, ಕಬಕಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಚನ್ನರಾಯಪಟ್ಟಣ, ಶ್ರವಣ ಬೆಳಗೊಳ, ಬಿ. ಜಿ. ನಗರ, ಯಡಿಯೂರು, ಕುಣಿಗಲ್, ನೆಲಮಂಗಲ ಹಾಗೂ ಚಿಕ್ಕಬನವರ ರೈಲು ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿವೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸಿಡಿಲು ಬಡಿದು ಒಂದೇ ಕುಟುಂಬದ ಇಬ್ಬರು ಸಾವು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement