ಅನುಕಂಪದ ಆಧಾರದಲ್ಲಿ ನೇಮಕಾತಿ ನಿಯಮಕ್ಕೆಸರ್ಕಾರದ ತಿದ್ದುಪಡಿ

ಬೆಂಗಳೂರು: ಅನುಕಂಪದ ಆಧಾರದಲ್ಲಿ ಕುಟುಂಬದವರಿಗೆ ನೌಕರಿ ನೀಡುವ ನಿಯಮದಲ್ಲಿ ರಾಜ್ಯ ಸರ್ಕಾರ ಮಹತ್ವದ ಬದಲಾವಣೆ ಮಾಡಿ ಅಧಿಸೂಚನೆ ಹೊರಡಿಸಿದೆ.
ಸರ್ಕಾರಿ ಹುದ್ದೆಯಲ್ಲಿರುವವರು ಮೃತಪಟ್ಟಾಗ ಅನುಕಂಪದ ಆಧಾರದಲ್ಲಿ ಅವರ ಅವಲಂಬಿತರನ್ನು ಸರ್ಕಾರಿ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುವ ಕರ್ನಾಟಕ ನಾಗರಿಕ ಸೇವಾ (ಅನುಕಂಪದ ಆಧಾರದಲ್ಲಿ ನೇಮಕಾತಿ) ನಿಯಮಗಳಿಗೆ ತಿದ್ದುಪಡಿ ಮಾಡಿ ಸರ್ಕಾರ ಅಧಿಸೂಚನೆ ಹೊರಡಿಸಿದೆ.
ಇದರ ಅನ್ವಯ ಸರ್ಕಾರಿ ನೌಕರರು ಅಕಾಲಿಕ ಮರಣಕ್ಕೆ ತುತ್ತಾದರೆ ಅವರ ಜತೆ ಇದ್ದ ವಿಧವಾ ಪತ್ನಿ ಅನುಕಂಪದ ಆಧಾರದಲ್ಲಿ ಹುದ್ದೆ ಪಡೆಯಲು ಅರ್ಹರಾಗಿರುತ್ತಾರೆ. ಅವರಿಗೆ ಅರ್ಹತೆ ಇಲ್ಲದೆ ಇದ್ದರೆ ಅಥವಾ ಅವರು ನೇಮಕಾತಿ ಬಯಸದೆ ಇದ್ದರೆ ಅವರು ಮಗ ಅಥವಾ ಮಗಳನ್ನು ಈ ಹುದ್ದೆಗೆ ಸೂಚಿಸಬಹುದಾಗದೆ.
ಮೃತ ನೌಕರರು ಅವಿವಾಹಿತರಾಗಿದ್ದರೆ ಅವರ ತಂದೆ ಅಥವಾ ತಾಯಿ ಆಯ್ಕೆ ಮಾಡಿದ ಸಹೋದರ ಅಥವಾ ಸಹೋದರಿಯನ್ನು ಆ ಹುದ್ದೆಗೆ ನೇಮಿಸಲು ಅವಕಾಶವಿದೆ. ತಂದೆ, ತಾಯಿ ಕೂಡ ಮೃತಪಟ್ಟಿದ್ದರೆ ವಯಸ್ಸಿನ ಆಧಾರದಲ್ಲಿ ಹಿರಿಯ ಸಹೋದರ ಅಥವಾ ಸಹೋದರಿಗೆ ಅನುಕಂಪದ ಆಧಾರದ ಮೇಲೆ ಕೆಲಸ ನೀಡಬಹುದು.
ವಿವಾಹಿತ ಮಹಿಳಾ ನೌಕರರು ನಿಧನರಾದರೆ ಆಕೆಯ ಪತಿ ಆಯ್ಕೆ ಮಾಡಿದ ಮಗ ಅಥವಾ ಮಗಳಿಗೆ ಉದ್ಯೋಗ ನೀಡಬಹುದು. ಮಗ, ಮಗಳು ಅರ್ಹರಾಗಿಲ್ಲದೆ ಹೋದರೆ ಅಥವಾ ಅವರು ನೇಮಕಾತಿ ಬಯಸದಿದ್ದರೆ ವಿಧುರ ಪತಿಗೆ ಹುದ್ದೆ ನೀಡಬಹುದಾಗಿದೆ. ಪತಿ ಮೃತಪಟ್ಟಿದ್ದರೆ, ಮಕ್ಕಳ ವಯಸ್ಸಿಗೆ ಅನುಗುಣವಾಗಿ ಹುದ್ದೆ ನೀಡಬೇಕು ಎಂದು ತಿಳಿಸಲಾಗಿದೆ.
ಅವಿವಾಹಿತೆಯಾಗಿದ್ದು, ಮೃತಪಟ್ಟರೆ ಆಕೆಯೊಂದಿಗೆ ವಾಸವಿದ್ದ ಸಹೋದರ ಅಥವಾ ಸಹೋದರಿ ಹುದ್ದೆಗೆ ಅರ್ಹರಾಗುತ್ತಾರೆ. ಮಕ್ಕಳು ಅಪ್ರಾಪ್ತ ವಯಸ್ಸಿನವರಾಗಿದ್ದರೆ, ಎರಡು ವರ್ಷದೊಳಗೆ ಅವರು 18 ವರ್ಷ ಆಗುವಂತಿದ್ದರೆ ಅವಕಾಶ ನೀಡಬಹುದು ಎಂದು ತಿಳಿಸಲಾಗಿದ್ದು, 18 ತುಂಬಿದ ಬಳಿಕ ಸಂಬಂಧಿತ ಇಲಾಖಾ ಮುಖ್ಯಸ್ಥರಿಗೆ ಅರ್ಜಿ ಸಲ್ಲಿಸಲು ಎರಡು ವರ್ಷ ಕಾಲಾವಕಾಶ ನೀಡಬೇಕು ಎಂದು ತಿಳಿಸಲಾಗಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಜನವರಿಯಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ ವಿವಾಹಿತ ಹೆಣ್ಣುಮಕ್ಕಳಿಗೂ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ಈ ಸಂಬಂಧ ಫೆ. 2ರಂದು ತಿದ್ದುಪಡಿ ನಿಯಮದ ಕರಡು ಪ್ರಕಟಿಸಲಾಗಿತ್ತು.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಅಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement