ಉತ್ತರ ಪ್ರದೇಶದಲ್ಲಿ ಭಾನುವಾರ 15 ಸಾವಿರ ದಾಟಿದ ಏಕದಿನದ ಸೋಂಕು..!

ಕಳೆದ ಕೆಲವು ದಿನಗಳಲ್ಲಿ ಕೊರೊನಾ ವೈರಸ್ (ಕೋವಿಡ್ -19) ದೈನಂದಿನ ಹೊಸ ಪ್ರಕರಣಗಳು ಹೆಚ್ಚಾಗುತ್ತಿರುವ ಉತ್ತರ ಪ್ರದೇಶ, ಭಾನುವಾರ ಮತ್ತೊಂದು ದಾಖಲೆಯ ಹೆಚ್ಚಳಕ್ಕೆ ಸಾಕ್ಷಿಯಾಗಿದೆ. ಉತ್ತರ ಪ್ರದೇಶದಲ್ಲಿ ಕೊರೊನಾ ದೈನಂದಿನ ಸೋಂಕು ಮೊದಲ ಬಾರಿಗೆ 15,000ಕ್ಕಿಂತ ಹೆಚ್ಚಾಗಿದೆ..! . ಕಳೆದ 24 ಗಂಟೆಗಳಲ್ಲಿ ಉತ್ತರ ಪ್ರದೇಶದಲ್ಲಿ 15,353 ಹೊಸ ಪ್ರಕರಣಗಳು ದಾಖಲಾಗಿವೆ ಮತ್ತು ಸಕ್ರಿಯ ಪ್ರಕರಣ 71,241 ಕ್ಕೆ ಏರಿದೆ” ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಅಮಿತ್ ಮೋಹನ್ ಪ್ರಸಾದ್ ಹೇಳಿದ್ದಾರೆ. ಒಟ್ಟು ಚೇತರಿಸಿಕೊಂಡ ಪ್ರಕರಣಗಳು 6,11,622 ಆಗಿದೆ. ವೈರಲ್ ಕಾಯಿಲೆಯ ವಿರುದ್ಧ ನೀಡಲಾಗುವ ಲಸಿಕೆ ಪ್ರಮಾಣಗಳ ಸಂಖ್ಯೆ 85, 15,296ಕ್ಕೆ ಏರಿದೆ.
ಆರೋಗ್ಯ ಇಲಾಖೆಯ ಪ್ರಕಾರ, ದಿನದಲ್ಲಿ 67 ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ, ರಾಜ್ಯದ ಸಾವಿನ ಸಂಖ್ಯೆ 9152 ಕ್ಕೆ ತಲುಪಿದೆ. ಸುಮಾರು 50% ಸಾವುಗಳು ರಾಜಧಾನಿ ಲಕ್ನೋದಲ್ಲಿವೆ, ಇದು 31 ಸಾವುನೋವುಗಳನ್ನು ದಾಖಲಿಸಿದೆ.
ಶನಿವಾರ, ರಾಜ್ಯದಲ್ಲಿ 12,787 ಹೊಸ ಕೊರೊನಾ ವೈರಸ್ ರೋಗ ಪ್ರಕರಣಗಳು ಪತ್ತೆಯಾಗಿತ್ತು. ಭಾನುವಾರ ಕೊರೊನಾದ ದೈನಂದಿನ ಸೋಂಕು ಅದನ್ನೂ ಮೀರಿಸಿದೆ.

ಪ್ರಮುಖ ಸುದ್ದಿ :-   'ಐಸ್‌ಕ್ರೀಂ ಮ್ಯಾನ್‌' ಖ್ಯಾತಿಯ ನ್ಯಾಚುರಲ್ಸ್ ಐಸ್ ಕ್ರೀಂ ಸಂಸ್ಥಾಪಕ ರಘುನಂದನ ಕಾಮತ್ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement