5 ದಿನಗಳಲ್ಲಿ ಕುಂಭಮೇಳದಲ್ಲಿ 1,700 ಜನರಿಗೆ ಕೊರೊನಾ ಸೋಂಕು..!

ಋಷಿಕೇಶ: ಏಪ್ರಿಲ್ 10 ರಿಂದ 14 ರವರೆಗೆ ಹರಿದ್ವಾರ ಕುಂಭಮೇಳ ಪ್ರದೇಶದಲ್ಲಿ 1,700 ಕ್ಕೂ ಹೆಚ್ಚು ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ವಿಶ್ವದ ಅತಿದೊಡ್ಡ ಧಾರ್ಮಿಕ ಕೂಟಗಳಲ್ಲಿ ಒಂದಾದ ಕುಂಭಮೇಳದಲ್ಲಿ ಕೊರೊನಾವೈರಸ್ ಪ್ರಕರಣಗಳು ಶೀಘ್ರವಾಗಿ ಏರಲು ಮತ್ತಷ್ಟು ಕಾರಣವಾಗಬಹುದು ಎಂಬ ಆತಂಕವನ್ನು ಇದು ದೃಢಪಡಿಸುತ್ತದೆ. ವೈದ್ಯಕೀಯ ಕಾರ್ಯಕರ್ತರು ಮೇಳದ ಸ್ಥಳದಲ್ಲಿ ಐದು ದಿನಗಳ ಅವಧಿಯಲ್ಲಿ 2,36,751 ಪರೀಕ್ಷೆಗಳನ್ನು ನಡೆಸಿದ್ದಾರೆ. ಈ ಪೈಕಿ 1,701 ಕೊರೊನಾ ಸೋಂಕು ಪತ್ತೆಯಾಗಿದೆ.
ಹರಿದ್ವಾರದಿಂದ ದೇವ್‌ ಪ್ರಯಾದ ವರೆಗೆ ವಿಸ್ತರಿಸಿರುವ ಇಡೀ ಮೇಳ ತಾಣದಲ್ಲಿ ಐದು ದಿನಗಳ ಅವಧಿಯಲ್ಲಿ ಭಕ್ತರು ಮತ್ತು ವಿವಿಧ ಅಖಡಾಗಳ (ಸಾಧುಗಳ ಗುಂಪು ಗ) ವೀಕ್ಷಕರ ಆರ್‌ಟಿ-ಪಿಸಿಆರ್ ಮತ್ತು ರಾಪಿಡ್ ಆಂಟಿಜೆನ್ ಪರೀಕ್ಷಾ ವರದಿಗಳು ಈ ಸಂಖ್ಯೆಗಳಲ್ಲಿ ಸೇರಿವೆ ಎಂದು ಹರಿದ್ವಾರದ ಮುಖ್ಯ ವೈದ್ಯಕೀಯ ಅಧಿಕಾರಿ ಶಂಭು ಕುಮಾರ್ ಝಾ ಗುರುವಾರ ತಿಳಿಸಿದ್ದಾರೆ.
ಹೆಚ್ಚಿನ ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಗಳಿಗಾಗಿ ಕಾಯಲಾಗುತ್ತಿದೆ ಮತ್ತು ಕುಂಭಮೇಳ ತಾಣದಲ್ಲಿ ಸೋಂಕಿತರ ಸಂಖ್ಯೆ 2,000 ಕ್ಕೆ ಏರುವ ಸಾಧ್ಯತೆ ಇದೆ ಎಂದು ಪ್ರವೃತ್ತಿ ತೋರಿಸುತ್ತದೆ. ಋಷಿಕೇಶ ಸೇರಿದಂತೆ ಕುಂಭಮೇಳ ಪ್ರದೇಶವು 670 ಹೆಕ್ಟೇರ್ ಪ್ರದೇಶದಲ್ಲಿ ಹರಿದ್ವಾರ, ಟೆಹ್ರಿ ಮತ್ತು ಡೆಹ್ರಾಡೂನ್ ಜಿಲ್ಲೆಗಳಲ್ಲಿ ವ್ಯಾಪಿಸಿದೆ.

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement