ಚೆಕ್‌ ಬೌನ್ಸ್‌ ಪ್ರಕರಣಗಳ ಶೀಘ್ರ ವಿಲೇವಾರಿಗೆ ಕೇಂದ್ರಕ್ಕೆ ಸುಪ್ರಿಂ ಕೋರ್ಟ್‌ ನೊಟೀಸ್‌ ‌

ನವದೆಹಲಿ:ಚೆಕ್ ಬೌನ್ಸ್ ಕೇಸುಗಳ ಶೀಘ್ರ ವಿಲೇವಾರಿಗೆ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್, ಒಬ್ಬ ವ್ಯಕ್ತಿಯ ವಿರುದ್ಧ ಒಂದು ವರ್ಷದೊಳಗೆ ದಾಖಲಾಗುವ ಪ್ರಕರಣಗಳಲ್ಲಿ ವಿಚಾರಣೆಗಳನ್ನು ಒಟ್ಟುಗೂಡಿಸಿ ವಿಚಾರಣೆಗಳ ಶೀಘ್ರ ವಿಲೇವಾರಿ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಈ ಸಂಬಂಧ ಎಲ್ಲಾ ಹೈಕೋರ್ಟ್ ಗಳಿಗೆ ಆದೇಶ ಹೊರಡಿಸಿರುವ ಸುಪ್ರೀಂ ಕೋರ್ಟ್, ಚೆಕ್ ಬೌನ್ಸ್ ಕೇಸುಗಳನ್ನು ನಿಭಾಯಿಸುವಂತೆ ವಿಚಾರಣಾಧೀನ ನ್ಯಾಯಾಲಯಗಳಿಗೆ ಮಾರ್ಗಸೂಚಿ ಹೊರಡಿಸಬೇಕೆಂದು ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಎಸ್ಎ. ಬೊಬ್ಡೆ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ, ಚೆಕ್ ಬೌನ್ಸ್ ಕೇಸುಗಳಲ್ಲಿ ಸಾಕ್ಷಿಗಳಿಗೆ ಅಫಿಡವಿಟ್ಟು ಸಲ್ಲಿಸಬಹುದು, ಸಾಕ್ಷಿಗಳನ್ನು ಭೌತಿಕವಾಗಿ ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ಹೇಳಿದೆ.

ವ್ಯಕ್ತಿಯ ವಿರುದ್ಧ 12 ತಿಂಗಳಲ್ಲಿ ದಾಖಲಾದ ಚೆಕ್ ಬೌನ್ಸ್ ಪ್ರಕರಣಗಳಲ್ಲಿನ ವಿಚಾರಣೆಗಳನ್ನು ಒಂದು ಏಕೀಕೃತ ಪ್ರಕರಣವಾಗಿ ಒಗ್ಗೂಡಿಸಬಹುದು ಎಂದು ತಿಳಿದುಕೊಳ್ಳಲು ನೆಗೋಶಿಯೇಬಲ್ ಇನ್ಸ್‌ಟ್ರುಮೆಂಟ್‌ ಆಕ್ಟ್ ನಡಿ ಸೂಕ್ತ ತಿದ್ದುಪಡಿಗಳನ್ನು ಮಾಡಬಹುದು ಎಂದು ನ್ಯಾಯಪೀಠ ಹೇಳಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement