ಕೋವಿಡ್ ನಿಯಮ ಉಲ್ಲಂಘಿಸಿ ಜಾತ್ರೆ ; 18 ಜನರ ವಿರುದ್ಧ ಪ್ರಕರಣ ದಾಖಲು

ಧಾರವಾಡ:  ಕೊರೊನಾ ನಿಯಮ ಉಲ್ಲಂಘಿಸಿ ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಕೂಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ ಆಚರಿಸಿದ ಆರೋಪದ  ಮೇರೆಗೆ 18 ಜನರ ಮೇಲೆ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಶನಿವಾರ (ಏ.17) ಪ್ರಕರಣ ದಾಖಲಾಗಿದೆ.
ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಏ.3ರಿಂದ  ಜಿಲ್ಲೆಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ಆಚರಿಸಬಾರದು ಎಂದು  ಜಿಲ್ಲಾಧಿಕಾರಿಗಳು ನಿಷೇದಾಜ್ಞೆ ಜಾರಿ ಮಾಡಿ ಆದೇಶ ಹೊರಡಿಸಿದ್ದರು. ಏ. 13 ರಂದು ಈ ನಿಯಮ ಉಲ್ಲಂಘಿಸಿ, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡದೇ ಕುಬಿಹಾಳ ಗ್ರಾಮದಲ್ಲಿ ಬಸವೇಶ್ವರ ಜಾತ್ರೆ  ಆಚರಿಸಲಾಗಿದೆ ಎಂದು ಕೂಬಿಹಾಳ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಬಸವರಾಜ ಬಾಗಲ ಪ್ರಕರಣ ಕುರಿತು ದೂರು ದಾಖಲಿಸಿದ್ದಾರೆ.
ರಾಮಪ್ಪ ಸಂಶಿ, ಸಿದ್ದಪ್ಪ ರಡ್ಡೇರ, ಹನಮಂತಪ್ಪ ವಡಕಣ್ಣವರ, ಮಂಜುನಾಥ ಪೂಜಾರ, ಯಲ್ಲಪ್ಪ ಹೆಬಸೂರ, ಚಂದ್ರಶೇಖರ ಪಾಲಕರ್, ಬಸಪ್ಪ ಹೊರಗಿನಮನಿ, ಬಸವರಾಜ ದೇಶಪಾಂಡೆ, ಯಲ್ಲಪ್ಪ ಬಿಳೆಬಲ್, ನಿಂಗಪ್ಪ ಬಾಚಣಕಿ, ಬಾಬುಖಾನ್ ನೂರಾಲಿಖಾನವರ, ಚೆನ್ನಬಸಪ್ಪ ರಡ್ಡೇರ, ಸುರೇಶಗೌಡ ಪಾಟೀಲ, ವೀರಪಾಕ್ಷಯ್ಯ ಕುಮಾರಗೊಪ್ಪ, ಬಸನಗೌಡ ಶಿರಕೋಳ, ಶಿವಪ್ಪ ತಳವಾರ, ಜಗದೀಶ ಬಾಗಲ, ಬಸಪ್ಪ ಕುಂಬಾರ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕುಂದಗೋಳ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement