ಝರಾಕ್ಸ್ ಅಂಗಡಿಯಲ್ಲಿ ಸಿಗುತ್ತಿದ್ದ ಕೊರೊನಾ ನೆಗೆಟಿವ್ ವರದಿ: ವ್ಯಕ್ತಿ ಬಂಧನ

ಹೊಸಪೇಟೆ: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಸಂದರ್ಭದಲ್ಲಿ ಬೇರೆ ರಾಜ್ಯಗಳಿಂದ ಬರುವವರಿಗೆ ಅಥವಾ ಬೇರೆ ರಾಜ್ಯಗಳಿಗೆ ಹೋಗುವವರಿಗೆ ಕೊರೊನಾ ನೆಗೆಟಿವ್ ವರದಿಯನ್ನು ಕರ್ನಾಟಕ ಸೇರಿದಂತೆ ಕೆಲ ರಾಜ್ಯಗಳು ಕಡ್ಡಾಯ ಮಾಡಿವೆ.
ಇಂತಹ ಪರಿಸ್ಥಿತಿಯಲ್ಲಿ ಹೊಸಪೇಟೆಯ ಜೆರಾಕ್ಸ್ ಅಂಗಡಿಯಲ್ಲಿ ನಕಲಿ ರಿಪೋರ್ಟ್ ತಯಾರಿ ಮಾಡಿಕೊಡುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. ಶಿವರಾಜ್ ಎನ್ನುವ ಆರೋಪಿಯನ್ನು ಹೊಸಪೇಟೆ ಠಾಣೆಯ ಪೊಲೀಸರು ಬಂಧಿಸಿದ್ದು ಈಥನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈತ ಶಿವ ಜೆರಾಕ್ಸ್ ಸೆಂಟರ್‌ನಲ್ಲಿ ನಕಲಿ ಕೊರೊನಾ ವರದಿಗಳನ್ನು ಮಾಡಿಕೊಡುತ್ತಿದ್ದ ಎಂದು ಆರೋಪಿಸಲಾಗಿದ್ದು, ಹೊಸಪೇಟೆಯಿಂದ ಬೇರೆ ಬೇರೆ ಕಡೆ ಪ್ರಯಾಣ ಮಾಡುವವರಿಗೆ ನಕಲಿ ಕೋವಿಡ್ ರಿಪೋರ್ಟ್ ವಿತರಿಸುತ್ತಿದ್ದ ಎನ್ನಲಾಗಿದೆ.
ರಾಜ್ಯ ಸರ್ಕಾರದ ಕೋವಿಡ್ ಪೋರ್ಟಲ್ ವಿಳಾಸಕ್ಕೆ ಹೋಗಿ ನೆಗೆಟಿವ್ ಬಂದಿರುವ ವ್ಯಕ್ತಿಗಳ ಐಡಿ ಬಳಸಿ, ಹೆಸರು ಬದಲು ಮಾಡಿ ನೆಗೆಟಿವ್ ಎಂದು ಈತ ವರದಿ ಕೊಡುತ್ತಿದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಈಗ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement