ಕೋವಿಡ್ ಲಸಿಕೆ ಪೂರೈಕೆಗೆ ಭಾರತದೊಂದಿಗೆ ಫಿಜರ್ ಮಾತುಕತೆ

ಫಿಜರ್ ಭಾರತದೊಂದಿಗೆ ಚರ್ಚೆಯಲ್ಲಿದೆ ಮತ್ತು ತನ್ನ ಕೋವಿಡ್‌-19 ಲಸಿಕೆ ದೇಶದಲ್ಲಿ ಲಭ್ಯವಾಗುವಂತೆ ಮಾಡಲು ಬದ್ಧವಾಗಿದೆ ಎಂದು ರಾಯಿಟರ್ಸ್ ಅಮೆರಿಕದ ಔಷಧಿ ತಯಾರಕ ಫಿಜರ್‌ ಉಲ್ಲೇಖಿಸಿ ವರದಿ ಮಾಡಿದೆ.
ಸರ್ಕಾರದ ರೋಗನಿರೋಧಕ ಕಾರ್ಯಕ್ರಮಮದ ಲಸಿಕೆಗಾಗಿ ಭಾರತಕ್ಕೆ ಲಾಭರಹಿತ ಬೆಲೆ ನೀಡಿದೆ ಎಂದು ಕಂಪನಿ ತಿಳಿಸಿದೆ. ಕಳೆದ ವಾರ, ವಿದೇಶಿ ನಿರ್ಮಿತ ಕೋವಿಡ್‌-19 ಲಸಿಕೆಗಳಿಗೆ ತುರ್ತು ಅನುಮೋದನೆ ನೀಡುವುದಾಗಿ ಭಾರತ ಸರ್ಕಾರ ಹೇಳಿದೆ, ಈ ಕ್ರಮವು ಕಂಪೆನಿಗಳು ತಮ್ಮ ಲಸಿಕೆಗಳಿಗೆ “ಬ್ರಿಡ್ಜಿಂಗ್” ಪ್ರಯೋಗಗಳನ್ನು ನಡೆಸುವುದರಿಂದ ವಿನಾಯಿತಿ ನೀಡುತ್ತದೆ.
ಏತನ್ಮಧ್ಯೆ, ಜಾನ್ಸನ್ ಮತ್ತು ಜಾನ್ಸನ್ ತನ್ನ ಸಿಂಗಲ್‌-ಡೋಸ್ ಕೋವಿಡ್‌-19 ಲಸಿಕೆಗಾಗಿ ಭಾರತದಲ್ಲಿ ಸ್ಥಳೀಯ ಕ್ಲಿನಿಕಲ್ ಪ್ರಯೋಗವನ್ನು ನಡೆಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ.
ಕೋವಿಡ್‌ ಪ್ರಕರಣಗಳ ಹೆಚ್ಚಳದಿಂದಾಗಿ ಭಾರತದಲ್ಲಿ ಆರೋಗ್ಯ ವ್ಯವಸ್ಥೆ ತೀವ್ರವಾಗಿ ಕುಸಿದಿದೆ ಮತ್ತು ಆಮ್ಲಜನಕ ಮತ್ತು ಔಷಧಿಗಳ ಕೊರತೆ ಉಂಟಾಗಿದೆ. ಭಾರತವು ಒಂದೇ ದಿನದಲ್ಲಿ ವಿಶ್ವದ ಅತಿ ಹೆಚ್ಚು ದೈನಂದಿನ 3,14,835 ಕೋವಿಡ್‌-19 ಸೋಂಕುಗಳನ್ನು ದಾಖಲಿಸಿದೆ.
ರಾಯಿಟರ್ಸ್ ಪ್ರಕಾರ, ಹಿಂದಿನ ದಾಖಲೆಯ ಒಂದು ದಿನದ ಪ್ರಕರಣಗಳುಅಮೆರಿಕದಲ್ಲಿ ದಾಖಲಾಗಿತ್ತು. ಇದು ಜನವರಿಯಲ್ಲಿ ಒಂದು ದಿನದಲ್ಲಿ 2,97,430 ಹೊಸ ಪ್ರಕರಣಗಳು ದಾಖಲಾಗಿತ್ತು.ಈಗ ಭಾರತ ಅದನ್ನು ಮೀರಿಸಿ ಏಕದಿನದ ಪ್ರಕರಣ ದಾಖಲಿಸಿದೆ.
ಭಾರತದ ಒಟ್ಟು ಪ್ರಕರಣಗಳು ಈಗ 15.93 ಮಿಲಿಯನ್ ಆಗಿದ್ದರೆ, ಕಳೆದ 24 ಗಂಟೆಗಳಲ್ಲಿ ಸಾವುಗಳು 2,104 ರಷ್ಟು ಏರಿಕೆಯಾಗಿ ಒಟ್ಟು 1,84,657 ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.
18 ವರ್ಷಕ್ಕಿಂತ ಮೇಲ್ಪಟ್ಟವರಿಗೂಲಸಿಕೆ ಸಿಗುವಂತಾಗಲು ಭಾರತ ಸರ್ಕಾರ ಮೇ 1 ರಿಂದ ವ್ಯಾಕ್ಸಿನೇಷನ್ ಅಭಿಯಾನಕ್ಕೆ ತೆರೆಯಲಿದೆ.
ಏತನ್ಮಧ್ಯೆ, ಫಿಜರ್ ತನ್ನ ಕೋವಿಡ್‌ -19 ಲಸಿಕೆಯ ಹೆಚ್ಚುವರಿ 100 ಮಿಲಿಯನ್ ಪ್ರಮಾಣವನ್ನು 27 ಯುರೋಪಿಯನ್ ಒಕ್ಕೂಟದ (ಇಯು) ಸದಸ್ಯ ರಾಷ್ಟ್ರಗಳಿಗೆ 2021 ರಲ್ಲಿ ಪೂರೈಸುವುದಾಗಿ ಪ್ರಕಟಿಸಿದೆ.

ಪ್ರಮುಖ ಸುದ್ದಿ :-   'ಇದು ಸಾಮಾನ್ಯ ಚುನಾವಣೆಯಲ್ಲ' : ಲೋಕಸಭೆ ಚುನಾವಣೆ ಮೊದಲ ಹಂತದ ಮತದಾನಕ್ಕೂ ಮುನ್ನ ಬಿಜೆಪಿ-ಎನ್‌ಡಿಎ ಅಭ್ಯರ್ಥಿಗಳಿಗೆ ಪತ್ರ ಬರೆದ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement