ಆಮ್ಲಜನಕ ಖರೀದಿಗೆ ಪಿಎಂ ಕೇರ್ ನಿಧಿಗೆ ಆಸ್ಟ್ರೇಲಿಯಾ ಮಾಜಿ ವೇಗಿ ಬ್ರೆಟ್‌ ಲೀ ದೇಣಿಗೆ

ಹೊಸದಿಲ್ಲಿ : ಆಸ್ಟ್ರೇಲಿಯ ತಂಡದ ಮಾಜಿ ವೇಗಿ ಬ್ರೆಟ್‌ ಲೀ ಅವರು “ಪಿಎಂ ಕೇರ್ ನಿಧಿ’ಗೆ 1 ಬಿಟ್‌ ಕಾಯಿನ್‌(40 ಲಕ್ಷ ಮೌಲ್ಯ) ದೇಣಿಗೆ ನೀಡಿದ್ದಾರೆ.
ಈ ಮೂಲಕ ಕೊರೊನಾ ವಿರುದ್ಧ ಹೋರಾಡುತ್ತಿರುವ ಭಾರತಕ್ಕೆ ದೊಡ್ಡ ಮೊತ್ತದ ಆರ್ಥಿಕ ಬೆಂಬಲ ನೀಡಿದ್ದಾರೆ.
ಆಮ್ಲಜನಕದ ಕೊರತೆ ಎದುರಿಸುತ್ತಿರುವ ಭಾರತದ ಆಸ್ಪತ್ರೆಗಳಿಗೆ ಆಮ್ಲಜನಕದ ಸಿಲಿಂಡರ್‌ಗಳನ್ನು ಖರೀದಿಸಲು ಈ ದೇಣಿಗೆಯನ್ನು ನೀಡುತ್ತಿದ್ದೇನೆ. ಭಾರತ ನನಗೆ ಎರಡನೇ ತವರು ಮನೆ ಇದ್ದಂತೆ. ನನ್ನ ದೇಶವನ್ನು ಮಾತ್ರವಲ್ಲದೆ ಭಾರತ ದೇಶದ ಕ್ರಿಕೆಟ್‌ ಲೀಗ್‌ನಲ್ಲಿಯೂ ಪಾಲ್ಗೊಂಡಿದ್ದೇನೆ. ಭಾರತದ ಜನರು ಸಂಕಷ್ಟದಲ್ಲಿದ್ದು, ಅವರಿಗೆ ನೆರವಾಗುವುದು ನನ್ನ ಕರ್ತವ್ಯ. ಭಾರತ ಶೀಘ್ರವಾಗಿ ಚೇತರಿಸಿಕೊಳ್ಳಲಿ. ಇದಕ್ಕಾಗಿ ಜನರು ದಯವಿಟ್ಟು ಮನೆಯಲ್ಲೇ ಉಳಿಯಿರಿ, ಸಾಮಾಜಿಕ ಅಂತರ ಕಾಪಾಡಿ, ಮಾಸ್ಕ್ ಧರಿಸಿ , ಸಂಕಟದಲ್ಲಿದ್ದವರಿಗೆ ನೆರವಾಗಿ ಎಂದು ಬ್ರೆಟ್‌ಲೀ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

3 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement