ಮೇ 2ರಂದು ಚುನಾವಣಾ ಫಲಿತಾಂಶ: ವಿಜಯೋತ್ಸವಕ್ಕೆ ಚುನಾವಣಾ ಆಯೋಗ ನಿಷೇಧ

ನವ ದೆಹಲಿ: ಮದ್ರಾಸ್ ಹೈಕೋರ್ಟ್ ನ ಖಡಕ್ ಎಚ್ಚರಿಕೆ ನೀಡಿದ ನಂತರ ಎಚ್ಚೆತ್ತ ಚುನಾವಣಾ ಆಯೋಗ ವಿಜಯೋತ್ಸವ್ಕೆ ನಿಷೇಧ ಹೇರಿದೆ.
ವಿಧಾನಸಭಾ ಚುನಾವಣೆ, ವಿವಿಧ ಲೋಕಸಭೆ ಉಪಚುನಾವಣೆ ನಡೆದ ರಾಜ್ಯಗಳಲ್ಲಿ ಮತ ಎಣಿಕೆ ದಿನದಂದು, ಮತ ಎಣಿಕೆಗೆ ಮೊದಲು ಅಥವಾಮತ ಎಣಿಕೆ ನಂತರ ಎಲ್ಲಾ ಬಗೆಯ ವಿಜಯೋತ್ಸವಗಳನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಕೊರೊನಾ ವೈರಸ್ ಹರಡುವಿಕೆ ತಪ್ಪಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೇ 2ರಂದು ಅಸ್ಸಾಂ, ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮತ್ತು ಪುದುಚೇರಿಯ ವಿಧಾನಸಭೆ ಚುನಾವಣಾ ಫಲಿತಾಂಶ ಹೊರಬೀಳಲಿದೆ.ಅಲ್ಲದೆ ಕರ್ನಾಟಕದ ಬೆಳಗಾವಿ ಲೋಕಸಭೆ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಉಪಚುನಾವಣೆ ಫಲಿತಾಂಶವೂ ಪ್ರಕರಟವಾಗಲಿದೆ. ಈ ನಿಟ್ಟಿನಲ್ಲಿ ಆದೇಶ ಹೊರಡಿಸಲಾಗಿದೆ.

5 / 5. 1

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಅಪ್ರಾಪ್ತ ವಿದ್ಯಾರ್ಥಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮುಂಬೈ ಶಿಕ್ಷಕಿ...! ಆತಂಕ ನಿವಾರಕ ಮಾತ್ರೆಯನ್ನೂ ನೀಡುತ್ತಿದ್ದಳಂತೆ

ನಿಮ್ಮ ಕಾಮೆಂಟ್ ಬರೆಯಿರಿ

advertisement