ಕೋವಿಡ್‌ ಸಂಕಷ್ಟದಲ್ಲಿ ಭಾರತದ ನೆರವಿಗೆ ಬಂದ ರಷ್ಯಾ

ನವ ದೆಹಲಿ: ಭಾರತದಲ್ಲಿ ಕೊರೊನಾ ಸೋಂಕು ತೀವ್ರ ಹೆಚ್ಚಳದಿಂದ ಹಲವು ಸಮಸ್ಯೆಗಳು ಉದ್ಭವಿಸುತ್ತಿವೆ. ಈ ಮಧ್ಯೆ ಹಲವು ರಾಷ್ಟ್ರಗಳು ಭಾರತದ ಬೆಂಬಕ್ಕೆ ಬಂದಿವೆ.ಈಗ ಕೊರೊನಾವಿರುದ್ಧ ಭಾರತ ನಡೆಸುತ್ತಿರುವ ಹೋರಾಟಕ್ಕೆ ರಷ್ಯಾ ದೇಶವೂ ಕೈ ಜೋಡಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಷ್ಯಾ ಅಧ್ಯಕ್ಷ ವ್ಲಾಡಿಮಿನ್​ ಪುಟಿನ್ ಈ ಕುರಿತು ಮಾತನಾಡಿದ್ದು, ಭಾರತಕ್ಕೆ ಅಗತ್ಯ ನೆರವು ನೀಡುವುದಾಗಿ ಪುಟಿನ್ ಭರವಸೆ ನೀಡಿದ್ದಾರೆ.
ಸ್ವತಃ ಪ್ರಧಾನಿ ಮೋದಿ ಈ ಬಗ್ಗೆ ಟ್ವೀಟ್‌ ಮಾಡಿದ್ದು, ಕೊರೊನಾ ಪರಿಸ್ಥಿತಿಯ ಬಗ್ಗೆ ನಾವು ಚರ್ಚೆ ನಡೆಸಿದ್ದೇವೆ. ಕೊರೊನಾ ವಿರುದ್ಧ ಹೋರಾಟಕ್ಕೆ ಸಹಕಾರ ನೀಡುತ್ತಿರುವ ರಷ್ಯಾ ಅಧ್ಯಕ್ಷರಿಗೆ ನಾನು ಧನ್ಯವಾದ ಹೇಳುತ್ತೇನೆ. ಭಾರತಕ್ಕೆ ಸ್ಪುಟ್ನಿಕ್​​​​-ವಿ ಲಸಿಕೆ ಪಡೆಯುವ ಕುರಿತು, ಎರಡು ದೇಶಗಳ ದ್ವಿಪಕ್ಷೀಯ ಭಾಂದವ್ಯದ ಕುರಿತು ಮಾತುಕತೆ ನಡೆಸಿದ್ದೇವೆ. ಪ್ರಮುಖವಾಗಿ ನವೀಕರಿಸಬಹುದಾದ ಹೈಡ್ರೋಜನ್​​​ ಕ್ಷೇತ್ರದಲ್ಲಿ ಚರ್ಚೆ ನಡೆಸಲಾಗಿದೆ’ ಎಂದು ಮೋದಿ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement