4.50 ಲಕ್ಷ ರೆಮ್ಡೆಸಿವಿರ್ ಆಮದು, ಮೊದಲ ಹಂತದ 75,000 ರೆಮ್ಡೆಸಿವಿರ್ ಇಂದು ಆಗಮನದ ನಿರೀಕ್ಷೆ

 

ನವ ದೆಹಲಿ: ಭಾರತದ ಅನೇಕ ರಾಜ್ಯಗಳು ರೆಮ್ಡೆಸಿವಿರ್ ಕೊರತೆ ವರದಿ ಮಾಡುತ್ತಿರುವುದರಿಂದ, ಕೇಂದ್ರ ಸರ್ಕಾರವು ಕೋವಿಡ್ ಚಿಕಿತ್ಸೆಯಲ್ಲಿ ಬಳಸುವ ನಿರ್ಣಾಯಕ ಔಷಧವನ್ನ ಆಮದು ಮಾಡಿಕೊಳ್ಳಲು ಪ್ರಾರಂಭಿಸಿದೆ.
ಮೊದಲ ಹಂತದಲ್ಲಿ 75,000 ಸೀಸೆಗಳು ಶುಕ್ರವಾರ (ಏಪ್ರಿಲ್‌ ೩೦) ಭಾರತಕ್ಕೆ ಬರಲಿದೆ. ಈ ವರ್ಷದ ಜುಲೈಗೆ ಮೊದಲು ಇನ್ನೂ 3,75,000 ಸೀಸೆಗಳನ್ನ ನಿರೀಕ್ಷಿಸಲಾಗಿದೆ ಎಂದು ಸರ್ಕಾರ ಹೇಳಿದೆ. ದೇಶೀಯವಾಗಿ ಔಷಧದ ಉತ್ಪಾದನೆಯನ್ನ ತಿಂಗಳಿಗೆ 3.4 ದಶಲಕ್ಷ ಸೀಸೆಗಳಿಂದ ತಿಂಗಳಿಗೆ 10.3 ದಶಲಕ್ಷಕ್ಕೂ ಹೆಚ್ಚು ಸೀಸೆಗಳಿಗೆ ಉತ್ಪಾದನೆಯನ್ನು ಹೆಚ್ಚಿಸಲಾಗಿದೆ ಎಂದು ಸರ್ಕಾರ ಹೇಳಿದೆ.
ಸರ್ಕಾರಿ ಸ್ವಾಮ್ಯದ ಎಚ್ ಎಲ್ ಎಲ್ ಲೈಫ್ ಕೇರ್ ಲಿಮಿಟೆಡ್, ರೆಮ್ಡೆಸಿವಿರ್ʼನ 4,50,000 ಸೀಸೆಗಳಿಗೆ ಆರ್ಡರ್‌ ನೀಡಿದೆ. ಅಮೆರಿಕದ ಗಿಲ್ಯಡ್ ಸೈನ್ಸಸ್ ಇಂಕ್, ಶುಕ್ರವಾರ ತಪ್ಪಿದರೆ ಶನಿವಾರ 75,000 ರಿಂದ 100,000 ಸೀಸೆಗಳನ್ನ ರವಾನಿಸಲಿದೆ ಎಂದು ನಿರೀಕ್ಷಿಸಲಾಗಿದೆ.
ಮೇ 15ರೊಳಗೆ ಇನ್ನೂ ಒಂದು ಲಕ್ಷ ಪ್ರಮಾಣಗಳನ್ನ ಪೂರೈಸಲಾಗುವುದು ಎಂದು ತಿಳಿಸಲಾಗಿದೆ.
ಅಲ್ಲದೆ, ಈಜಿಪ್ಟ್ ಮೂಲದ ಇವಿಎ ಫಾರ್ಮಾ ಕೂಡ ಆರಂಭದಲ್ಲಿ ಸುಮಾರು 10,000 ಸೀಸೆಗಳನ್ನ ಪೂರೈಸಲಿದೆ. ನಂತ್ರ ಪ್ರತಿ 15 ದಿನಗಳಿಗೊಮ್ಮೆ ಅಥವಾ ಜುಲೈವರೆಗೆ 50,000 ಸೀಸೆಗಳನ್ನ ಪೂರೈಸಲಿದೆ’ ಎಂದು ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಚಿವಾಲಯ ಶುಕ್ರವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ಪ್ರಮುಖ ಸುದ್ದಿ :-   ಪಾಟ್ನಾ ರೈಲ್ವೆ ನಿಲ್ದಾಣದ ಸಮೀಪದ ಹೊಟೇಲ್‌ ನಲ್ಲಿ ಬೆಂಕಿ ಅವಘಡ : 6 ಮಂದಿ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement