ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಆಮ್ಲಜನಕ ಬೆಡ್‌ ಖಾಲಿ ಇಲ್ಲ ಎಂಬ ಫಲಕ..!

ಶಿವಮೊಗ್ಗ: ಮುಖ್ಯಮಂತ್ರಿ ಯಡಿಯೂರಪ್ಪ ತವರು ಶಿವಮೊಗ್ಗದಲ್ಲಿ ಈಗ ಆಮ್ಲಜನಕ ಬೆಡ್‌ಗಳಿಗೆ ಕೊರತೆ ಉಂಟಾಗಿದೆ. ಇದನ್ನು ಪುಷ್ಟೀಕರಿಸುವಂತೆ ಶಿವಮೊಗ್ಗ ಜಿಲ್ಲಾಸ್ಪತ್ರೆ (ಮೆಗ್ಗಾನ್‌) ಮುಂಭಾಗ ‘ಆಮ್ಲಜನಕ ಬೆಡ್ ಇಲ್ಲ’ ಎಂದು ಫಲಕ ಹಾಕಲಾಗಿದೆ.
ಈಗ ಉಸಿರಾಟದ ಸಮಸ್ಯೆ ಮತ್ತು ಆಮ್ಲಜನಕದ ತುರ್ತು ಅಗತ್ಯವಿರುವ ಕೋವಿಡ್ ಸೋಂಕಿತರಿಗೆ ಜಿಲ್ಲೆಯಲ್ಲಿ ಬೆಡ್ ಸಿಗದಂತಾಗಿದೆ. ಆದರೆ ಜಿಲ್ಲಾಡಳಿತ ಆಕ್ಸಿಜನ್ ಪ್ರಮಾಣಕ್ಕೆ ತಕ್ಕಂತೆ ಬೆಡ್‌ಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆಮ್ಲಜನಕ ಬಂದ ಬಳಿಕ ಬೆಡ್‌ ಹೆಚ್ಚಿಸಲಾಗುತ್ತದೆ ಎಂದು ಹೇಳಿದೆ.
ಮೆಗ್ಗಾನ್ ಆಸ್ಪತ್ರೆಯಲ್ಲಿ 400 ಆಮ್ಲಜನಕ ಬೆಡ್‌ಗಳಿವೆ. ಆದರೆ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದರಿಂದ ಇದ್ದ ಬೆಡ್‌ಗಳು ಭರ್ತಿಯಾಗಿದೆ. ಜಿಲ್ಲೆಯಲ್ಲಿ ಯಾವುದೇ ಬೆಡ್ ಸಮಸ್ಯೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹಾಗೂ ಜಿಲ್ಲಾಡಳಿತ ಹೇಳುತ್ತಿದ್ದರೂ ಜಿಲ್ಲಾಸ್ಪತ್ರೆಯೇ ಈಗ ಫಲಕ ಹಾಕುವ ಪರಿಸ್ಥಿತಿಗೆ ಬಂದಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬುಧವಾರ 702 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಸಕ್ರಿಯ ಪ್ರಕರಣಗಳ ಸಂಖ್ಯೆ 5192.
ಜಿಲ್ಲಾಡಳಿತ ಹೇಳುತ್ತಿರುವುದೇನು?; “ಆಕ್ಸಿಜನ್ ಪ್ರಮಾಣಕ್ಕೆ ತಕ್ಕಂತೆ ಬೆಡ್‌ಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅದಕ್ಕಿಂತಲೂ ಹೆಚ್ಚು ಬೆಡ್ ವ್ಯವಸ್ಥೆ ಮಾಡಿ, ಬಳಿಕ ಆಮ್ಲಜನಕ ಇಲ್ಲದೆ ಸೋಂಕಿತರು ನರಳುವುದು ಬೇಡ ಎಂದು ಹೀಗೆ ವ್ಯವಸ್ಥೆ ಮಾಡಲಾಗಿದೆ. ಸಂಜೆ ವೇಳೆಗೆ ಹೆಚ್ಚುವರಿ ಆಮ್ಲಜನಕ ಬಂದ ಬಳಿಕ ಉಳಿದ ವ್ಯವಸ್ಥೆ ಮಾಡುವುದಾಗಿ” ಮೆಗ್ಗಾನ್ ಆಸ್ಪತ್ರೆ ಅಧೀಕ್ಷಕ ಡಾ. ಶ್ರೀಧರ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ.

ಪ್ರಮುಖ ಸುದ್ದಿ :-   ವಿಡಿಯೊಗಳು | ಶಿವಮೊಗ್ಗ ದಸರಾ ಜಂಬೂ ಸವಾರಿ ವೇಳೆ ದಿಕ್ಕಾಪಾಲಾಗಿ ಓಡಿದ ಅಂಬಾರಿ ಹೊತ್ತ ಆನೆ ; ಬೆಳ್ಳಿ ಅಂಬಾರಿ ಕೆಳಕ್ಕೆ, ವಾಹನ ಜಖಂ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement