ತಮಿಳುನಾಡು ಸಿಎಂ ಆಗಿ ಎಂ.ಕೆ.ಸ್ಟಾಲಿನ್‌ ಪ್ರಮಾಣವಚನ

ಚೆನ್ನೈ: ತಮಿಳುನಾಡಿನ 8ನೇ ಮುಖ್ಯಮಂತ್ರಿಯಾಗಿ ಮುತ್ತುವೇಲ್ ಕರುಣಾನಿಧಿ ಸ್ಟಾಲಿನ್(ಎಂ.ಕೆ.ಸ್ಟಾಲಿನ್) ಶುಕ್ರವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಚೆನ್ನೈ ರಾಜಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಎಂ. ಕೆ. ಸ್ಟಾಲಿನ್ ಅವರಿಗೆ ರಾಜ್ಯಪಾಲರಾದ ಬನ್ವರಿಲಾಲ್ ಪುರೋಹಿತ್ ಅವರು ಅಧಿಕಾರ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು.
ತಮಿಳುನಾಡಿನ ಖ್ಯಾತ ರಾಜಕಾರಣಿ ಡಿಎಂಕೆ ಪಕ್ಷದ ಸಂಸ್ಥಾಪಕ ಎಂ ಕರುಣಾನಿಧಿ ಪುತ್ರ ಎಂ.ಕೆ.ಸ್ಟಾಲಿನ್ 2018, ಆಗಸ್ಟ್ 28ರಿಂದ ಪಕ್ಷವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.
ಈ ಹಿಂದೆ 2009ರಲ್ಲಿ ತಮಿಳು ನಾಡಿನ ಉಪ ಮುಖ್ಯಮಂತ್ರಿ ಹುದ್ದೆ, 2006ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಸ್ಥಳೀಯ ಆಡಳಿತ ಸಚಿವ ಖಾತೆನಿಭಾಯಿಯಿಸಿದ ಅನುಭವವಿದೆ. 2018ರಲ್ಲಿ ಎಂ. ಕರುಣಾನಿಧಿಯವರ ನಿಧನ ಬಳಿಕ ಡಿಎಂಕೆ ಅಧ್ಯಕ್ಷ ಹುದ್ದೆಯನ್ನು ಪೂರ್ಣ ಪ್ರಮಾಣದಲ್ಲಿ ಸ್ಟಾಲಿನ್ ಅವರು ವಹಿಸಿಕೊಂಡು ಈ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ.

5 / 5. 2

ನಿಮ್ಮ ಕಾಮೆಂಟ್ ಬರೆಯಿರಿ

advertisement